Breaking News

ಹುಬ್ಬಳ್ಳಿ-ಧಾರವಾಡ

ರಾಜಣ್ಣ ಕೊರವಿ ನೇತೃತ್ವದಲ್ಲಿ ಮನೆಮನೆಗೆ ಭಾರತೀಯ ಜನತಾ ಪಕ್ಷದ ಕರಪತ್ರ

ಹುಬ್ಬಳ್ಳಿ ಧಾರವಾಡ ವಾರ್ಡ್ ನಂಬರ್ 36ರಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ ಇವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಕರಪತ್ರಗಳನ್ನು ಮನೆಮನೆಗೆ ಹಂಚಲಾಯಿತು ಹಾಗೂ ಪ್ರತಿ ಮನೆಗೆ ಸ್ಟಿಕರ್ಗಳನ್ನು ಅಂಟಿಸಲಾಯಿತು ಮತ್ತು ಗೋಡೆಗಳ ಮೇಲೆ ಭಾರತೀಯ ಜನತಾ ಪಕ್ಷದ ಚಿನ್ನೆಯನ್ನು ಗೋಡೆಗಳ ಮೇಲೆ ಮನೆ ಮಾಲೀಕರ ಪರವಾನಗಿ ಪಡೆದು ಚಿತ್ರಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡಿನ ಅಧ್ಯಕ್ಷ ಬಸವರಾಜ್ ಮಾಡಳ್ಳಿ, ಕೃಷ್ಣ ಉಳವಣ್ಣವರ, ಮಂಜು ಕೋಳಿಕಾಲ್, ಮಂಜು ಮೂಡ್ಲವರ್, ಮಂಜುನಾಥ. …

Read More »

ನೈರುತ್ಯ ರೈಲ್ವೆಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಸಡಗರದಿಂದ ಆಚರಣೆ

•ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಹುಬ್ಬಳ್ಳಿಯ ರೈಲ್ವೆ ಕ್ರೀಡಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕವಾಯತು ವೀಕ್ಷಿಸಿದರು. •ನೈರುತ್ಯ ರೈಲ್ವೆಯು ಪ್ರಮುಖ ಕಾರ್ಯಕ್ಷಮತೆಯ ನಿಯತಾಂಶಗಳಲ್ಲಿ ಭಾರತೀಯ ಎಲ್ಲಾ ರೈಲ್ವೆಯ ವಲಯಗಳಲ್ಲಿ ಮೊದಲನೇ ಸ್ಥಾನ ಮತ್ತು ಸಮಯಪಾಲನೆಯಲ್ಲಿ ಮೂರನೇ ಸ್ಥಾನ ಪಡೆದಿದೆ. •ರೈಲ್ವೆ ಸಚಿವಾಲಯದ ನಾವೀನ್ಯತಾ (INNOVATION) ಸ್ಪರ್ಧೆಯಲ್ಲಿ ನೈರುತ್ಯ ರೈಲ್ವೆಯು ಎರಡನೇ ಸ್ಥಾನ ಗಳಿಸಿದೆ. •ಜನವರಿಯಿಂದ ಡಿಸೆಂಬರ್ 2022ರ ಅವಧಿಯಲ್ಲಿ ನೈರುತ್ಯ ರೈಲ್ವೆಯ ಇತಿಹಾಸದಲ್ಲಿಯೇ ಒಂದೇ ವರ್ಷದಲ್ಲಿ …

Read More »

ಹುಬ್ಬಳ್ಳಿಯ ರೈಲ್‌ ಸೌಧ್‌ದಲ್ಲಿ ಶಿಶು ಪಾಲನಾ ಕೇಂದ್ರ ನವೀಕರಣ

ರೈಲ್ವೆ ಮಹಿಳಾ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈಲ್‌ ಸೌಧದಲ್ಲಿ ಶಿಶುಗಳ ಆರೈಕೆ ಕೇಂದ್ರ ನವೀಕರಣಗೊಂಡಿದ್ದು ಇಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್‌ ಕಿಶೋರ್‌ ಅವರು ಉದ್ಘಾಟಿಸಿದರು. ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ಎರಡು ಕೊಠಡಿಯ ಕೇಂದ್ರ ಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯಲ್ಲಿ ವೃತ್ತಿನಿರತರಾದ ತಾಯಂದಿರ ಅನುಕೂಲಕ್ಕಾಗಿ ತಮ್ಮ ಎಂಟು ತಿಂಗಳಿಂದ ಏಳು ವರ್ಷದ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋದರೆ ಅವರನ್ನು …

Read More »

’74 ನೇ ಗಣರಾಜ್ಯೋತ್ಸವ’ ಈದ್ಧಾ ಮೈದಾನದಲ್ಲಿ ಬಂದೋಬಸ್ತ್

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈದ್ಧಾ ಮೈದಾನದಲ್ಲಿ ಪೋಲಿಸರ ಹದ್ದಿನ ಕಣ್ಣು ಹುಬ್ಬಳ್ಳಿ: ಜನವರಿ 26 ನಾಳೆ ದಿನದಂದು ದೇಶಾದ್ಯಂತ 74ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯಿರುವ ಇದ್ದಾ ಮೈದಾನದಲ್ಲಿ ಪೊಲೀಸ್ ಭದ್ರತೆಯಿಂದ ಸ್ವಚ್ಚತಾ ಕಾರ್ಯ ನಡೆದಿದೆ. ಪ್ರತಿವರ್ಷ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದು, ಇಂದು ಮತ್ತು ನಾಳೆ ಇದ್ದಾ ಮೈದಾನದಲ್ಲಿ ವಾಹನ ಪಾರ್ಕಿಂಗ್ ನಿಷೇಧ ಮಾಡಿದೆ. ಪೌರ ಕಾರ್ಮಿಕರು ಮೈದಾನದ ಸ್ವಚ್ಚತೆ ಕಾರ್ಯ ನಡೆಸಿದ್ದು, ಧ್ವಜಾರೋಹಣಕ್ಕೂ …

Read More »

ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡೋಣ; ಸದೃಡ ಪ್ರಜಾಪ್ರಭುತ್ವ ನಿರ್ಮಿಸೋಣ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ ಭಾರತೀಯ ಮತದಾನ ವ್ಯವಸ್ಥೆ ತನ್ನ ಮುಕ್ತತೆ, ನಿಷ್ಪಕ್ಷಪಾತತೆ ಮತ್ತು ಸುರಕ್ಷತೆ ದೃಷ್ಟಿಯಿಂದ ವಿಶ್ವದಲ್ಲಿ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗ ಮತದಾರರ ನೆನೆಕೆಗೆ ಮತ್ತು ಮತದಾರನಿಗೆ ಗೌರವಿಸುವುದಕ್ಕೆ ಭಾರತೀಯ ಚುನಾವಣಾ ಆಯೋಗವು ತನ್ನ ಸಂಸ್ಥಾಪನಾ ದಿನವಾದ ಜ.25 ಅನ್ನು ಮತದಾರ ದಿನವೆಂದು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಧಾರವಾಡ ಜಿಲ್ಲಾಡಳಿತ ಸಂಯುಕ್ತವಾಗಿ ಆಯೋಜಿಸಿದ್ದ …

Read More »

29 ರಂದು ಅಂತಃಕರಣ ಫೌಂಡೇಶನ್ ಹಾಗೂ ಜೆ. ಎಸ್. ಎಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ವಿಕಲ ಚೇತನ ಹಾಗೂ ಬುದ್ಧಿ ಮಾಂದ್ಯ ಮಕ್ಕಳ ವಾಷಿ೯ಕೋತ್ಸವ.

ಧಾರವಾಡ ಅಂತಃಕರಣ ಫೌಂಡೇಶನ್ ಒಂದು ನೋಂದಾಯಿತ ಸರಕಾರೇತರ ಸಂಸ್ಥೆಯಾಗಿದ್ದು, ಮೂಲತಃ ದಿವ್ಯಾಂಗ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಜೊತೆಜೊತೆಗೆ ಯುವ ಜನತೆಯಲ್ಲಿ ಸ್ವಯಂಸೇವಾ ಮನೋಭಾವವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದೆ ಎಂದು ಸಂಸ್ಕೃತಿ ಪೂಜಾರ್ (ಮಳಗಿ) ತಿಳಿಸಿದರು. ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರುದಿವ್ಯಾಂಗರು ನಮ್ಮ ನಿಮ್ಮಂತೆ ಸಹಜ ಹಾಗೂ ಗೌರವಯುತ ಜೀವನ ಸಾಗಿಸುವ ಹಕ್ಕನ್ನು ಹೊಂದಿದ್ದು ಅವರಿಗೆ ನಮ್ಮ ಸಹಾಯ ಕಳಕಳಿ ಮಾತ್ರ ಸಾಕು. ವಿಶೇಷ ಮಕ್ಕಳು (ವಿಭಿನ್ನ ಸಾಮರ್ಥ್ಯ ಹೊಂದಿದ) …

Read More »

ಪತ್ರಕರ್ತರಾದ ಯಲ್ಲಪ್ಪ ಸೋಲಾರಗೊಪ್ಪ, ಶಿವಕುಮಾರ ಪತ್ತಾರಗೆ ರಾಯಣ್ಣ ಪ್ರಶಸ್ತಿ

ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 229ನೇ ಹುತಾತ್ಮ ದಿನಾಚರಣೆ ಅಂಗವಾಗಿ ಪತ್ರಿಕೋದ್ಯಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ 26ರಂದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಯುಕ್ತ ಕರ್ನಾಟಕದ ಷಣ್ಮುಖ ಕೋಳಿವಾಡ, ಟಿವಿ 5 ಕನ್ನಡ ವರದಿಗಾರರಾದ ಯಲ್ಲಪ್ಪ ಸೋಲಾರಗೊಪ್ಪ, ಟಿವಿ 9 ವರದಿಗಾರರಾದ ಶಿವಕುಮಾರ್ ಪತ್ತಾರ, ಪ್ರಜಾವಾಣಿಯ ಗೋವಿಂದ ಜವಳಿ, ಸಂಯುಕ್ತ ಕರ್ನಾಟಕದ ವಿನಾಯಕ ದೇಶಪಾಂಡೆ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿಯ ಗಣನೀಯ ಸೇವೆಯನ್ನು …

Read More »

ನಿಧಿ ಹೆಸರಲ್ಲಿ ವಂಚನೆ‌ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ

ಧಾರವಾಡ: ಜನರಿಗೆ ನಿಧಿಯಾಸೆ ತೋರಿಸಿ ವಂಚನೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ನವಲಗುಂದ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮೂಲದ ನಾಗಯ್ಯ ಹಾಗೂ ಧಾರವಾಡ ಜಿಲ್ಲೆಯ ನುಗ್ಗಿಕೇರಿ ಗ್ರಾಮ ಮಾರುತಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಜನರಿಗೆ ನಿಮ್ಮ ಮನೆಯಲ್ಲಿ ನಿಧಿ ಇದೆ. ಅದನ್ನು ನಾವು ಹುಡುಕಿಕೊಡುತ್ತೇವೆ ಎಂದು ನಂಬಿಸಿ, ಇದಕ್ಕೊಂದು ದೊಡ್ಡ ಪೂಜೆ ಮಾಡಬೇಕು ಎಂದು ಹೇಳಿ ಅವರಿಂದ ಹಣ ಪಡೆದು ವಂಚನೆ ಮಾಡಿ …

Read More »

ಸತ್ತೂರಿನ ಆಶ್ರಯ ಕಾಲೋನಿಯ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ರೋಟರಿ ಸಂಸ್ಥೆ ಯಿಂದ ಮೊಲ ಭೂತ ಸೌಕರ್ಯ. .

ಧಾರವಾಡ : RID 3170 ರ ಜಿಲ್ಲಾ ಅನುದಾನ ಯೋಜನೆ, ರೋಟರಿ ಕ್ಲಬ್ ಧಾರವಾಡ ಹೆರಿಟೇಜ್, ಡಾ.ವಾಯ್.ಎನ್.ಇರಕಲ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟನ ಶ್ರೀಯಾ ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸಾಯನ್ಸಸ್ ಧಾರವಾಡ ಸಹಭಾಗಿತ್ವದಲ್ಲಿ ಸತ್ತೂರಿನ ಆಶ್ರಯ ಕಾಲೋನಿಯ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶೌಚಾಲಯ ಬ್ಲಾಕ್‌ಗಳನ್ನು ಉದ್ಘಾಟಿಸಲಾಯಿತು ನೂತನವಾಗಿ ನಿರ್ಮಿಸಲಾದ ಶೌಚಾಲಯ ಬ್ಲಾಕ್‌ಗಳು ಮತ್ತು ಮೂತ್ರಾಲಯಗಳನ್ನು ಮುಖ್ಯ ಅತಿಥಿಗಳಾದ ಮಾಜಿ ರೋಟರಿ ಜಿಲ್ಲಾ ಗವರ್ನರ …

Read More »

ತೆಗ್ಗಿಗೆ ಇಳಿದ ಲಾರಿ : ಪ್ರಾಣಾಪಾಯದಿಂದ ಪಾರು…

ನವಲಗುಂದ : ಸೋಮವಾರ ಬೆಳ್ಳಂಬೆಳಗ್ಗೆ ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಹತ್ತಿ ಸಾಗಿಸುತ್ತಿದ್ದ ಲಾರಿ ಒಂದು ತೆಗ್ಗಿಗೆ ಇಳಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೌದು… ನವಲಗುಂದ ಕಡೆಯಿಂದ ಸೌದತ್ತಿ ಕಡೆಗೆ ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲೆ ಇದ್ದ ತೆಗ್ಗಿಗೆ ಉರುಳಿದೆ. ಘಟನೆಯಿಂದ ಲಾರಿಗೆ ಹಾನಿ ಉಂಟಾಗಿದ್ದು, ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. …

Read More »