ನವಲಗುಂದ : ಸೋಮವಾರ ಬೆಳ್ಳಂಬೆಳಗ್ಗೆ ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಹತ್ತಿ ಸಾಗಿಸುತ್ತಿದ್ದ ಲಾರಿ ಒಂದು ತೆಗ್ಗಿಗೆ ಇಳಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಹೌದು… ನವಲಗುಂದ ಕಡೆಯಿಂದ ಸೌದತ್ತಿ ಕಡೆಗೆ ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲೆ ಇದ್ದ ತೆಗ್ಗಿಗೆ ಉರುಳಿದೆ. ಘಟನೆಯಿಂದ ಲಾರಿಗೆ ಹಾನಿ ಉಂಟಾಗಿದ್ದು, ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರ ಸಹಾಯದಿಂದ ಇನ್ನೊಂದು ಲಾರಿಗೆ ಹತ್ತಿಯ ಚೀಲವನ್ನು ವರ್ಗಾಯಿಸಲಾಯಿತು.