Breaking News

ಕರ್ನಾಟಕ

ಕೆಲಗೇರಿ ಕೆರೆಯಲ್ಲಿ ಹಾರಿ ಗೃಹಿಣಿಯೊರ್ವಳು ಆತ್ಮಹತ್ಯೆ

ಧಾರವಾಡ: ಧಾರವಾಡದ ಕೆಲಗೇರಿ ಕೆರೆಗೆ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಧಾರವಾಡ ಸಂತೋಷನಗರದ ನಿವಾಸಿ ಅನಿತಾ ಹೆಗಡೆ ಎಂಬುವವರೇ ಸಾವನ್ನಪ್ಪಿದವರು. ಅನಿತಾ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅಲ್ಲದೇ ಹಲವು ದಿನಗಳಿಂದ ಧಾರವಾಡದ ಡಿಮಾನ್ಸ್‌ನಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇಂದು ಬೆಳಗಿನಜಾವ ಏಕಾಏಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Read More »

ವಾಣಿಜ್ಯ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಚಾಕು‌ ಸದ್ದು- ಹರಿಯಿತು ನೆತ್ತರು

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಚಾಕು ಸದ್ದು ಮಾಡಿ ರಕ್ತ ಹರಿಸಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಚಾಕು ಇರಿತಕ್ಕೊಳಗಾದವ.. ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೆಗ್ಗೇರಿ ಬಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು. ಆಶೀಪ್ ಎಂಬಾತನ ಮೇಲೆ ಎರಡು ಜನ ಚಾಕುವಿನಿಂದ ಇರಿದಿದ್ದು,ಕೈ ಹಾಗೂ ಹೊಟ್ಟೆ ಭಾಗಕ್ಕೆ ಮೂರು ಕಡೆ ಚಾಕುವಿನಿಂದ ಇರಿಯಲಾಗಿದ್ದು,ಗಾಯಗೊಂಡ ಆಶೀಪ್ ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಹಳೇ …

Read More »

ರಾಮಮಂದಿರ ಟ್ರಸ್ಟ್ ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ

ನವದೆಹಲಿ : ಮರ್ಯಾದ ಪುರುಷೋತ್ತಮ ಶ್ರೀರಾಮ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದುಬಾರಿ ಬೆಲೆಗೆ ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ಭೂಮಿ ಖರೀದಿಸುತ್ತಿದೆ ಎಂದು ಹೇಳಿದ್ದಾರೆ.ಶ್ರೀರಾಮ ಮಂದಿರ ನಿರ್ಮಾಣ ಘೋಷಣೆ ಬಳಿಕ ದೇವಸ್ಥಾನದ ಸುತ್ತಲಿನ ಭೂಮಿಗೆ ಭಾರೀ ಬೇಡಿಕೆ ಬಂದಿದೆ. ಇದನ್ನೇ ಬಂಡವಾಳ …

Read More »

ಸಾರಿಗೆ ಸಂಸ್ಥೆ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಧಾರವಾಡ: ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ಸಮೀಪ ನಡೆದಿದೆ. ಮುಳಮುತ್ತಲ ಗ್ರಾಮದ ಚನ್ನಪ್ಪ ಬಸಪ್ಪ ಬನವಣ್ಣವರ (21) ಎಂಬ ಯುವಕನೇ ಸಾವನ್ನಪ್ಪಿದವನು. ಈತ ಬೈಕ್ ತೆಗೆದುಕೊಂಡು ಧಾರವಾಡ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಧಾರವಾಡ ಕಡೆಯಿಂದ ಯಾದವಾಡ ಕಡೆಗೆ ಬರುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಯುವಕ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. …

Read More »

ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು: ಸಿಎಂ

ಬೆಳಗಾವಿ: ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯ ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡದ ಹೊಸ ನಿವೇಶನದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡಗಳ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಇಂದಿನ ಸವಾಲುಗಳ ಹಾಗೂ ಬದಲಾವಣೆಯ ಯುಗಕ್ಕೆ ಹೊಂದಿಕೊಳ್ಳುವ ಶಿಕ್ಷಣ ವ್ಯವಸ್ಥೆ ಅತ್ಯಂತ ಅವಶ್ಯಕ ಎಂದರು. ಪಠ್ಯದಲ್ಲಿರುವ ವಿದ್ಯೆ ಹಾಗೂ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯೆಯಲ್ಲಿ ಬಹಳಷ್ಟು ಅಂತರ ಇದೆ. ಇವರೆಡರ …

Read More »

ರಸ್ತೆ ನಡುವೆಯೇ ಮದ್ಯ ತುಂಬಿದ್ದ ಬಾಕ್ಸ್‌ಗೆ ಬೆಂಕಿ ಹಚ್ಚಿದ ಯುವಕರು

ಹಾಸನ: ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡರಜಗಲಿ ಗ್ರಾಮದಲ್ಲಿ ಯುವಕರೇ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾಗಿದ್ದು, ಗ್ರಾಮಕ್ಕೆ ತಲುಪಿದ್ದ ಮದ್ಯ ವಶಕ್ಕೆ ಪಡೆದು ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 15 ದಿನಗಳ ಹಿಂದೆ ಗ್ರಾಮ ಚನ್ನಯ್ಯ ಅವರ ಪತ್ನಿ ಮದ್ಯ ಸೇವನೆಯಿಂದ ಮೃತಪಟ್ಟಿದ್ದರು. ಇದರಿಂದ ಎಚ್ಚೆತ್ತ ಗ್ರಾಮದ ಯುವಕರು ಗ್ರಾಮದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲು ನಿರ್ಧರಿಸಿದ್ದರು. ಅದರಂತೆ ಬ್ಯಾಡರಜಗಲಿ ಗ್ರಾಮದಲ್ಲಿ ಮದ್ಯ ಮಾರಾಟ …

Read More »

ಜನರ ಭಾವನೆಗಳನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದೆ-ಸಿದ್ಧರಾಮಯ್ಯ

ಬೆಳಗಾವಿ: ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಕಳ್ಳರ ಹಾಗೆ ಜಾರಿಗೆ ತಂದಿದ್ದಾರೆ. ಹೀಗಾಗಿ, ಸದನದ ಹೊರಗೆ ಮತ್ತು ಒಳಗೂ ಕಾನೂನು‌ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದವರು ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದ್ದಾರೆ. ಇವತ್ತಿನವರೆಗೆ ಆಮಿಷ ಹಾಗೂ ಪ್ರಚೋದನೆಗಳಿಗೆ ಮತಾಂತರವಾಗಿದ್ದು ಬಹಳ ಕಡಿಮೆ. ಏನಾದರೂ ಮತಾಂತರವಾಗಿದ್ದರೆ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಿಂದ ಅವಮಾನವಾಗಿ ಆರ್ಥಿಕ …

Read More »

26 ರಂದು ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ಧಾರವಾಡದ ನವಲೂರಿನಲ್ಲಿರುವ ಆದಿತ್ಯ ಮಯೂರ ರೆಸಾರ್ಟ್ ನಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ವತಿಯಿಂದ ೨೦೨೦-೨೧ ನೇ ಸಾಲಿನ ಎಸ್.ಎಸ್.ಎಲ್. ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ೮೦% ಮತ್ತು ೮೦% ಕ್ಕಿಂತ ಅಧಿಕ ಅಂಕ ಪಡೆದು ತೇರ್ಗಡೆಯಾದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ಕೋಶಾಧ್ಯಕ್ಷರಾದ ಸುಧೀರ್ ಉಪ್ಪಾರ ತಿಳಿಸಿದರು. …

Read More »

‘ಸಚಿವ ಭೈರತಿ ಬಸವರಾಜ್’ಗೆ ಬಿಗ್ ರಿಲೀಫ್: ‘ಹೈಕೋರ್ಟ್’ನಿಂದ ‘ಸಮನ್ಸ್’ಗೆ ತಡೆ

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಭೂಹಗರಣದ ಆರೋಪ ಹೊತ್ತಿರುವಂತ ಸಚಿವ ಬೈರತಿ ಬಸವರಾಜ ರಾಜೀನಾಮೆ ಒತ್ತಾಯಿಸಲಾಗಿತ್ತು. ಇದರ ನಡುವೆಯೂ ಇಂದು ರಾಜ್ಯ ಹೈಕೋರ್ಟ್ ಪ್ರಕರಣ ಸಂಬಂಧ ಸಚಿವ ಬೈರತಿ ಬಸವರಾಜ್ ಗೆ ನೀಡಿರುವಂತ ಸಮನ್ಸ್ ಗೆ ತಡೆಯಾಜ್ಞೆ ನೀಡಿದೆ. ಈ ಮೂಲಕ ಭೈರತಿ ಬಸವರಾಜ್ ಗೆ ಬಿಗ್ ರಿಲೀಫ್ ನೀಡಿದೆ.

Read More »

ಆಕಾಶದಲ್ಲಿ ಸಾಗಿದ ಬೆಳಕಿನ ಚುಕ್ಕಿಗಳು: ಬೆರಗಾದ ಉಡುಪಿ ಜಿಲ್ಲೆಯ ಜನತೆ

ಉಡುಪಿ: ನಿನ್ನೆ ರಾತ್ರಿ ಆಕಾಶದಲ್ಲಿ ಸಾಲುಸಾಲು ಬೆಳಕಿನ ಚುಕ್ಕಿಗಳು ಕಾಣಸಿಕ್ಕಿದ್ದು ಉಡುಪಿ ಜಿಲ್ಲೆಯ ಜನರಲ್ಲಿ ಕೌತುಕ ಮೂಡಿಸಿತು.ಸರಳರೇಖೆಯಲ್ಲಿ ಹಾದುಹೋದ ನೂರಾರು ಬೆಳಕಿನ ಚುಕ್ಕಿಗಳನ್ನ ಜಿಲ್ಲೆಯ ಜನತೆ ಕಂಡು ಬೆರಗಾದರು. ಕುಂದಾಪುರ, ಮಲ್ಪೆ ಉಡುಪಿ ಮೊದಲಾದ ಪ್ರದೇಶದಲ್ಲಿ ಜನರು ಇದನ್ನು ವೀಕ್ಷಣೆ ಮಾಡಿದ್ದು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಇದು ಕೃತಕ ಉಪಗ್ರಹಗಳ ಚಲನೆ ಎಂದು ಖಗೋಳತಜ್ಞರು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಜನತೆ ನಿರಾಳರಾದರು.ಸಂಜೆಯ ವೇಳೆ ಕರಾವಳಿ ಭಾಗದಲ್ಲಿ ಕಂಡು ಬಂದಿರುವ ಅಪರೂಪದ ವಿದ್ಯಮಾನ …

Read More »