Breaking News

ಕರ್ನಾಟಕ

ಅನೈತಿಕ ಸಂಬಂಧವಾಗಿ ಪತಿಯನ್ನೇ ಕೊಲೆ ಮಾಡಿಸಿದ ಕಿರಾತಿಕ ಪತ್ನಿ…. ಪ್ರೇಯಕರನ ಜೊತೆ ಸೇರಿ ಗಂಡನ ಕೊಲೆಗೈದ ಹೆಂಡತಿ…

ಧಾರವಾಡ : ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ತನ್ನ ಪತಿಯನ್ನೇ ಸತಿಯೊಬ್ಬಳು ಕೊಲೆ ಮಾಡಿದ ಘಟನೆ ನಡೆದಿದ್ದು, ಇದಕ್ಕೆ ಅನೈತಿಕ ಸಂಬಂಧ ಕಾರಣವೆನ್ನಲಾಗಿದೆ. ಮುಳಮುತ್ತಲ ಗ್ರಾಮದಲ್ಲಿನ ಭೀಮಪ್ಪ ಸಿದ್ಧಣ್ಣವರ ಎಂಬಾತನನ್ನ ಈತನ ಪತ್ನಿ ಕಾವೇರಿ ಹಾಗೂ ಆಕೆಯ ಪ್ರಿಯಕರ ಶಿವು ನಿಂಬೋಜಿ ಕೂಡಿಕೊಂಡು ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ. ಭೀಮಣ್ಣನ ಸತಿ ಕಾವೇರಿ ಮದುವೆಯಾದ ನಂತರವೂ ಶಿವುನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದೇ ಕಾರಣಕ್ಕೆ ಪದೇ ಪದೇ ಮನೆಯಲ್ಲಿ ಜಗಳ …

Read More »

ಪೇಢಾ ನಗರಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಮೂವರಿಗೆ ಗಂಭೀರ ಗಾಯ ಹಲವು ವಾಹನಗಳು ಜಖಂ

ಧಾರವಾಡ :ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಎರಡು ಅಪಘಾತ ಗಳಾಗಿದ್ದು ಈ ಎರಡು ಪ್ರತ್ಯೇಕವಾದ ಅಪಘಾತಗಳಲ್ಲಿ ಮೂವರು ಗಾಯಗೊಂಡಿದ್ದು ಹಲವಾರು ಕಾರು ಮತ್ತು ಆಟೋಗಳು ಜಖಂಗೊಂಡಿವೆ. ಹೌದು ಧಾರವಾಡದ ಯಾಲಕ್ಕಿ ಶೆಟ್ಟರ ಕಾಲೋನಿಯ ವಿಶಾಲ ಮಾರ್ಟ್ ಮುಂದೆ ನಡೆದ ಒಂದು ಅಪಘಾತದಲ್ಲಿ ಕಾರಿಗೆ ಆಟೋ ಗುದ್ದಿದ ಪರಿಣಾಮವಾಗಿ ಎರಡು ಕಾರು ಗಳು ಒಂದು ಆಟೋ ಜಖಂ ಆಗಿದ್ದು ಇನ್ನೂ ಆಟೋ ಚಾಲಕ ಗಾಯಗೊಂಡಿದ್ದು ಇನ್ನೂ ಪೊಲೀಸ ಆಯುಕ್ತರ ಕಚೇರಿ ಮುಂದೆ ನಡೆದ …

Read More »

ಕಟ್ಟುವುದು ಮನುಷ್ಯತ್ವ, ಕೆಡವುದು ರಾಕ್ಷಸತ್ವ- ಸಿದ್ದು ಕುಟುಕಿದ ಎಚ್ ಡಿಕೆ!

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ಕೋಳಿ ಜಗಳ ಮುಂದುವರೆದಿದೆ. ಮೈತ್ರಿ ಸರ್ಕಾರ ರಚನೆ ಮಾಡಲು ಜೆಡಿಎಸ್ ನವರ ಮನೆ ಬಾಗಿಲಿಗೆ ಹೋಗಿಲ್ಲ. ವರಿಷ್ಠರ ಜೊತೆಗೆ ಮಾತುಕತೆ ಆಗಿದ್ದು, ನಿಜ. ನಾನಂತೂ ಅವರ ಮನೆಗೆ ಹೋಗಿಲ್ಲ ಎಂದು ಸಿದ್ದರಾಮಯ್ಯ ಕೋಲಾರದ ನೀಡಿದ್ದ ಹೇಳಿಕೆ ಬಗ್ಗೆ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಇಂದು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಜೆಡಿಎಸ್ ನಾಯಕರು ಮತ್ತು ಪಕ್ಷದ ಬಗ್ಗೆ ಸರಣಿ …

Read More »

ಇಂಗ್ಲೆಂಡ್​​ನಿಂದ ಬಂದ ಇಬ್ಬರು ಮಕ್ಕಳು ಸೇರಿ ಐವರಿಗೆ ಕೊರೊನಾ

ದೇವನಹಳ್ಳಿ : ವಿದೇಶದಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಮುಂಜಾನೆ ಇಂಗ್ಲೆಂಡ್​​ನಿಂದ ಬಂದ 5 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಮುಂಜಾನೆ ಯುಕೆಯಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಆಗಮಿಸಿದ್ದು, ಪ್ರಯಾಣಿಕರನ್ನ ಆರ್ ಟಿ ಪಿಸಿಆರ್ ಟೆಸ್ಟ್​​​ಗೆ ಒಳಪಡಿಸಿದ್ದಾಗ 5 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 18 ವರ್ಷದ ಇಬ್ಬರಿಗೆ, 6 ವರ್ಷದ ಇಬ್ಬರು ಮಕ್ಕಳಿಗೆ ಮತ್ತು 30 ವರ್ಷದ …

Read More »

ವಿಸ್ತರಿತ ವಲಯ ಸಾಮರ್ಥ್ಯದ ಪಿನಾಕ ರಾಕೆಟ್‌ ವ್ಯವಸ್ಥೆ ಪರೀಕ್ಷೆ ಯಶಸ್ವಿ

ನವದೆಹಲಿ: ‘ವಿಸ್ತರಿತ ವಲಯ ಸಾಮರ್ಥ್ಯ’ದ ಪಿನಾಕ ರಾಕೆಟ್‌ ವ್ಯವಸ್ಥೆಯ (ಪಿನಾಕ-ಇಆರ್‌) ಪರೀಕ್ಷಾರ್ಥ ಸರಣಿ ಪ್ರಯೋಗಗಳನ್ನು ಕಳೆದ ಮೂರು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.ಪೋಖರಣ್ ಪರೀಕ್ಷಾ ವಲಯದಲ್ಲಿ ಈ ರಾಕೆಟ್‌ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗಿದೆ. ಖಾಸಗಿ ಉದ್ದಿಮೆಯೊಂದು ಈ ರಾಕೆಟ್‌ ವ್ಯವಸ್ಥೆಯನ್ನು ತಯಾರಿಸಿದೆ. ರಾಕೆಟ್‌ ವ್ಯವಸ್ಥೆಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಖಾಸಗಿ ಉದ್ದಿಮೆವೊಂದಕ್ಕೆ ಡಿಆರ್‌ಡಿಒ ವರ್ಗಾಯಿಸಿತ್ತು. ‘ಸೇನೆಯ ಸಹಯೋಗದಲ್ಲಿ ಡಿಆರ್‌ಡಿಒ ತಜ್ಞರು ಮೂರು ದಿನಗಳ …

Read More »

“ಸಶಕ್ತ ಮಹಿಳೆ ಸಶಕ್ತಿ ಸಮಾಜ”ಸಂದೇಶದ ಗುಲಾಬಿ ಗಾಣ ಎಣ್ಣೇ ಘಟಕ ಉದ್ಘಾಟನೆ

ಹುಬ್ಬಳ್ಳಿ: ಇನ್ನರವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಸಿಟಿ ವತಿಯಿಂದ ಇತ್ತೀಚಿಗೆ ಗೋಕುಲ ಗ್ರಾಮದಲ್ಲಿ ಗುಲಾಬಿ ಗಾಣದ ಎಣ್ಣೆ ಘಟಕವನ್ನು ಕ್ಲಬ್‌ನ ರಾಷ್ಟ್ರೀಯ ಅಧ್ಯಕ್ಷ ಸರೋಜ ಕಟಿಯಾರ್ ಉದ್ಘಾಟಿಸಿದರು. ಇನ್ನರವೀಲ್ ಕ್ಲಬ್ ಹುಬ್ಬಳ್ಳಿ ಸಿಟಿ ಅಧ್ಯಕ್ಷೆ ಅಂಜಲಿ ಕುಲಕಣಿರ ಅವರ ನೇತೃತ್ವದಲ್ಲಿ ಮಹಿಳೆಯರ ಸಬಲೀಕರಣದ ದ್ಯೂತ್ಯಕವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರ ಒಂದು ಭಾಗವಾಗಿ ಗುಲಾಬಿ ಗಾಣದ ಎಣ್ಣೆ ಘಟಕವನ್ನು ತೆರೆಯಲಾಯಿತು. ಈ ಘಟಕನ್ನು ಸರೋಜ ಕಟಿಯಾರ್ ಅವರು ಸ್ಥಳೀಯ ಗೋಕುಲ …

Read More »

ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

ಮುಂಬೈ: ಬಾಲಿವುಡ್ ಸೆಲೆಬ್ರೆಟಿ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಶುಕ್ರವಾರ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಇಂದು ಕತ್ರಿನಾ ತಮ್ಮ ಅರಿಶಿನ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕತ್ರಿನಾ-ವಿಕ್ಕಿ ಶುಕ್ರವಾರ ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರಾದಲ್ಲಿರುವ ಸಿಕ್ಸ್ ಸೆನ್ಸಸ್ ರೆಸಾರ್ಟ್‍ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ನೆಚ್ಚಿನ ನಟಿಯ ಮದುವೆ ಫೋಟೋಗಳನ್ನು ನೋಡಲು ಅಭಿಮಾನಿಗಳು ಸಹ ಕಾತುರರಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ತಮ್ಮ ಮದುವೆ ಫೋಟೊವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ಕತ್ರಿನಾ, …

Read More »

ಪೂಜಾರಿಯ ಬೆತ್ತದೇಟಿಗೆ ಮಹಿಳೆ ಮೃತಪಟ್ಟ ಆರೋಪ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಹಾಸನ : ಅನಾರೋಗ್ಯ ಪೀಡಿತ ಮಹಿಳೆಯನ್ನು ಗುಣಪಡಿಸುವ ನೆಪದಲ್ಲಿ ಪೂಜೆ ವೇಳೆ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಪಾರ್ವತಿ (47) ಎಂಬುವರು ಮೃತಪಟ್ಟ ಮಹಿಳೆ. ಕಳೆದ ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ.ಹೀಗಾಗಿ, ದೇವರ ಮೊರೆ ಹೋಗಿದ್ದರು. ನೀವು ಗುಣಮುಖರಾಗಲು ಪೂಜೆ ಮಾಡಿಸಬೇಕು ಎಂದು ಮಹಿಳೆಗೆ ಹಿರಿಯಾಪಟ್ಟಣದಮ್ಮ ದೇವರ ಪೂಜಾರಿ ತಿಳಿಸಿದ್ದನಂತೆ. ನಂತರ ಪೂಜೆ …

Read More »

13ರಂದು ಭವ್ಯ ಕಾಶಿ ದಿವ್ಯ ಕಾಶಿ ನೇರ ಪ್ರಸಾರ: ಟೆಂಗಿನಕಾಯಿ

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ವತಿಯಿಂದ ಇದೇ 13ರಂದು ನಡೆಯಲಿರುವ ಎಲ್ಲಾ ಜ್ಯೋತಿರ್ಲಿಂಗಗಳ ಕೇಂದ್ರಗಳಲ್ಲಿ ದಿವ್ಯ ಕಾಶಿ ಭವ್ಯ ಕಾಶಿ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ದೇಶಾದ್ಯಂತ 51,000 ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ನಗರದಲ್ಲಿಂದು ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ನೇತೃತ್ವದಲ್ಲಿ ದಿವ್ಯ ಕಾಶಿ ಭವ್ಯ ಕಾಶಿ ಎಂಬುವಂತ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ …

Read More »

ಮಂಗಳೂರಿನ ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣ..ಮತಾಂತರ ಆರೋಪದಡಿ ಮಹಿಳೆ ಬಂಧನ

ಮಂಗಳೂರು : ಹಿಂದೂ ಧರ್ಮದ ಮಹಿಳೆಯನ್ನು ಮುಸ್ಲಿಂ ಧರ್ಮಕ್ಕೆ‌ ಮತಾಂತರ ಮಾಡಲು ಪ್ರಯತ್ನಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನೂರ್ ಜಹಾನ್ ಅವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 8ರಂದು ಮಂಗಳೂರಿನ ಮೋರ್ಗನ್ ಗೇಟ್ ಬಳಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ನಾಗೇಶ್ ಎಂಬ ವ್ಯಕ್ತಿ ತನ್ನಿಬ್ಬರು ಮಕ್ಕಳು ಮತ್ತು ಹೆಂಡತಿಯನ್ನು …

Read More »