Breaking News

ಅ. ೧೨ ರಿಂದ ಮೂರು ದಿನ ಭಾರತೀಯ ಆಭರಣ ಉತ್ಸವ, ಮಾರಾಟ‌ ಮೇಳ.

ಹುಬ್ಬಳ್ಳಿಯಲ್ಲಿ
ಅ.12ರಿಂದ ದ ಜ್ಯುವೆಲರಿ ಷೋ ಪ್ರದರ್ಶನ ಮತ್ತು ಮಾರಾಟ
ಹುಬ್ಬಳ್ಳಿ: ಮುಂಬರಲಿರುವ ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮೆರಗು ನೀಡುವ ಹಿನ್ನೆಲೆಯಲ್ಲಿ ನಗರದಲ್ಲಿಯೇ ಮೊದಲ ಭಾರಿಗೆ ಭಾರತೀಯ ಒಡವೆಗಳ ಉತ್ಸವವನ್ನು ಇದೇ. ಅ.12ರಿಂದ 14ರ ವರಗೆ ಡೆನಿಸನ್ಸ್ ಹೋಟೆಲನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಗದೀಶ ಬಿ.ಎನ್. ತಿಳಿಸಿದರು.
ನಗರದ ಡೆನಿಸನ್ಸ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದ್ದಾಗಿದ್ದು, ನಂಬಿಕಸ್ತ ಹೂಡಿಕೆಯೂ ಆಗಿದೆ. ಮೇಳದಲ್ಲಿ 25ಕ್ಕಿಂತಲೂ ಹೆಚ್ಚು ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಯವರು ಭಾಗವಹಿಸಲಿದ್ದಾರೆ ಎಂದರು.
ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಲಿರುವ ಈ ಮೇಳದಲ್ಲಿ ವಿಶೇಷ ವಿನ್ಯಾಸಗೊಂಡ ಆಭರಣಗಳನ್ನು ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮೇಳದಲ್ಲಿ ಬೆಂಗಳೂರಿನ ಧವನಮ್, ನವರತನ್, ನಿಖಾರ್, ಪಿ.ಎಮ್.ಜೆ., ಶ್ರೀಗಣೇಶ, ಆರ್ಟ್ ಇಂಡಿಯಾ ಜುವೆಲ್ಸ್, ಓರ್ರಾ, ಶಿವಾನಿ, ಸಿಲ್ವರ್ ಯುಗ್, ರೂಪಂ, ಸಂಜಯ್ ಜುವೆಲ್ಸ್, ಸ್ವಾತಿ ಪರ್ಲ್ಸ್, ಥಾರ್ ಹ್ಯಾಂಡಿಕ್ರಾಪ್ಟ್, ತೆಲಂಗಾಣದ ಭವಾನಿ ಜುವೆಲ್ಸ್ ಆ್ಯಂಡ್ ಜೆಮ್ಸ್, ನವದೆಹಲಿಯ ಔರಾ, ಕಲ್ಕತ್ತಾ ಟ್ರೇಡಿಷನ್ಸ್ ಸೇರಿದಂತೆ ಹಲವಾರು ಆಭರಣ ಕಂಪನಿಗಳು ಭಾಗವಹಿಸಲಿವೆ ಎಂದರು.
ಮೇಳದ ಉದ್ಘಾಟನೆಯನ್ನು ಪ್ರಚಾರ ರಾಯಭಾರಿ  ಶೃತಿ ಹರಿಹರನ್ ನೇರವೇರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೇಮಲತಾ ಸೇರಿದಂತೆ ಇತರರು ಇದ್ದರು. ಬಿಗ್ ಟಿವಿ ನ್ಯೂಸ್ ಹುಬ್ಬಳ್ಳಿ
Share News

About Shaikh BIG TV NEWS, Hubballi

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *