Breaking News

ತುಮಕೂರು

ಭೀಕರ ರಸ್ತೆ ಅಪಘಾತ : 9 ಮಂದಿ ಸಾವು

ತುಮಕೂರು : ಜಿಲ್ಲೆಯ ಶಿರಾ ಬಳಿಯ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟು ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ರಾಯಚೂರು ಮೂಲದ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಕ್ರೂಸರ್, ಲಾರಿಗೆ ಡಿಕ್ಕಿಯೊಡೆದಿದೆ.ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಗಾಯಾಳುಗಳನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಕ್ರೂಸರ್ ನುಜ್ಜುಗುಜ್ಜಾಗಿದೆ.

Read More »

ಮುಖ್ಯಮಂತ್ರಿ ಸೂಚಿಸಿದರೆ ರಾಜೀನಾಮೆ ನೀಡುವೆ : ಮಾಧುಸ್ವಾಮಿ

ತುಮಕೂರು: ‘ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್‌ ಮಾಡುತ್ತಿದ್ದೇವೆ’ ಎಂಬ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರ ಹೇಳಿಕೆಯಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿದ್ದು, ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿದೆ. ಘಟನೆಗೆ ಸಂಬಂಧಿಸಿದಂತೆ ಮಾಧುಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿವರಣೆ ನೀಡಿದ್ದು, ಮುಖ್ಯಮಂತ್ರಿ ಸೂಚಿಸಿದರೆ ರಾಜೀನಾಮೆ ನೀಡುವೆ ಎಂದು ಪ್ರಕಟಿಸಿದ್ದಾರೆ. ಈ ವಿವಾದವನ್ನು ರಾಜಕೀಯ ಅಸ್ತ್ರವಾಗಿ ಕೈಗೆತ್ತಿಕೊಂಡಿರುವ ಕಾಂಗ್ರೆಸ್‌ ಪಕ್ಷ, ಸರ್ಕಾರದ ಅಸಮರ್ಥತೆ ಸಚಿವರ ಹೇಳಿಕೆಯಿಂದಲೇ ಸಾಬೀತಾಗಿದೆ. ಇಂತಹ …

Read More »

ಪೊಲೀಸ ದಂಪತಿಯಿಂದ 200 ಜನಕ್ಕೆ ಕೆಲಸ ಕೊಡಿಸುವುದಾಗಿ ವಂಚನೆ, ಹಣದೊಂದಿಗೆ ಎಸ್ಕೇಪ್..

ತುಮಕೂರು: ಬ್ಯಾಂಕ್ ಹಾಗೂ ಪೊಲೀಸ್​ ಇಲಾಖೆಯಲ್ಲಿ ಕೆಲಸ‌ ಕೊಡಿಸುವ ಆಮಿಷವೊಡ್ಡಿ ಪೊಲೀಸ್ ದಂಪತಿ ಅಮಾಯಕರಿಗೆ ಕೊಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತುಮಕೂರಿನ ಜಯನಗರ ಬಡವಾಣೆಯಲ್ಲಿ ಈ ಘಟನೆ ನಡೆದಿದೆ. ಜಯನಗರ ಬಡವಾಣೆಯಲ್ಲಿ ವಾಸವಾಗಿದ್ದ ಪೊಲೀಸ್ ಪೇದೆ ಮಹೇಶ್‌ ಹಾಗೂ‌ ಸುಧಾ ದಂಪತಿ, ನಿರುದ್ಯೋಗಿಗಳನ್ನೇ ಟಾರ್ಗೆಟ್​​ ಮಾಡಿ ವಂಚಿಸಿದ್ದಾರೆ. ಈ ದಂಪತಿ ಬ್ಯಾಂಕ್ ಹಾಗೂ ಪೊಲೀಸ್​ ಇಲಾಖೆಯಲ್ಲಿ ಕೆಲಸ‌ ಕೊಡಿಸುವ ಆಮಿಷವೊಡ್ಡಿ ಹಣ ಪೀಕುತ್ತಿದ್ದರು. ಕಳೆದ 2‌-3 ವರ್ಷಗಳಿಂದ …

Read More »

‘ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ’ : ಸಿದ್ದರಾಮಯ್ಯ

ತುಮಕೂರು: ‘ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ‘ಸಗಣಿ, ಗಂಜಲ ಎತ್ತದ, ಹಸು ಸಾಕದ, ಉಳಿಮೆ ಮಾಡದವರು ಗೋ ಹತ್ಯೆ ಬಗ್ಗೆ ಮಾತನಾಡುತ್ತಾರೆ.ಅವರಿಂದ ನಾವು ಪಾಠ ಕಲಿಯಬೇಕೆ’ ಎಂದು ಪ್ರಶ್ನಿಸಿದರು. ‘ಅಲ್ಪ‌ ಸಂಖ್ಯಾತರ ಹಕ್ಕುಗಳು, ಅವರ ಪರವಾಗಿ ಮಾತನಾಡಿದರೆ, ಸಂಘ ಪರಿವಾರದವರು ನೀನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದಿಯಾ ಎಂದು ಕೇಳುತ್ತಾರೆ. ನಮ್ಮ ಧರ್ಮದಲ್ಲಿ ನಿಷ್ಠೆಯ ಜತೆಗೆ …

Read More »

ಸಾವಿನಲ್ಲಿ ಒಂದಾದ ಅಮರ ಪ್ರೇಮಿಗಳು

ತುಮಕೂರು: ಸಾವಿನಲ್ಲಿ ಒಂದಾದ ತುಮಕೂರು ಮೂಲದ ಪ್ರೇಮಿಗಳಿಬ್ಬರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಪ್ರಿಯಕರ ಅಪಘಾತದಲ್ಲಿ ಮೃತಪಟ್ಟ ನೋವಿನಿಂದ ಹೊರಬರಲಾಗದೇ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಳು. ಇದೀಗ ಆಕೆಯ ಅಂತ್ಯಕ್ರಿಯೆಯನ್ನು ಪ್ರಿಯಕರನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ. ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ (23) ಹಾಗೂ ಅದೇ ತಾಲ್ಲೂಕಿನ ಅರೆಹಳ್ಳಿ ಗ್ರಾಮದ ಸುಷ್ಮಾ(22) ಮೃತ ಪ್ರೇಮಿಗಳು. ಧನುಷ್​ ಅವರ ಜಮೀನಿನಲ್ಲೇ ಸುಷ್ಮಾಳ ಅಂತ್ಯಸಂಸ್ಕಾರವಾಗಿದೆ. ಯುವತಿ ಸ್ವಗ್ರಾಮ ಅರೆಹಳ್ಳಿಯಲ್ಲಿ ಸಮಾಧಿ ಮಾಡದೇ …

Read More »

ಕಾರ್ ನಡುವೆ ಟಿಂಪೋ ಡಿಕ್ಕಿ : 3 ಜನ ಸಾವು

ತುಮಕೂರು: ಕಾರ್ ಮತ್ತು ಟಿಂಪೋ ಟ್ರಾವೆಲ್ (ಟಿ.ಟಿ) ಮಧ್ಯೆ ನಡೆದ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟ ಘಟನೆ ಕುಣಿಗಲ್ ತಾಲ್ಲೂಕಿನ ಬೇಗೂರು ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಮೃತರನ್ನು ಬೆಂಗಳೂರು ಸಂಜಯನಗರ ನಿವಾಸಿಗಳಾದ ವಿಜಯ್, ರಾಘು, ಸಂತೊಷ ಎಂದು ಗುರುತಿಸಲಾಗಿದೆ. ಐದು ಜನ ಗಾಯಗೊಂಡಿದ್ದಾರೆ. ಎಲ್ಲರು ಬೆಂಗಳೂರಿನಿಂದ ಕಾರ್ ನಲ್ಲಿ ಹಾಸನದ ಕಡೆ ಹೋಗುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರ್, ರಸ್ತೆ ವಿಭಜಕಕ್ಕೆ …

Read More »

ಡಿವೈಎಸ್ಪಿ ಶಿವಕುಮಾರ್ ನಿಧನ

ತುಮಕೂರು: ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್ ಅವರು ಹೃದಯಾಘಾತದಿಂದ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ಮೂಲದ ನಿವಾಸಿಯಾಗಿರುವ ಶಿವಕುಮಾರ್​ ಕಳೆದ ಒಂದೂವರೆ ವರ್ಷದಿಂದ ತುಮಕೂರು ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.‌

Read More »

161 ಅಡಿ ಎತ್ತರದ ಆಂಜನೇಯ ಸ್ವಾಮಿ ವಿಗ್ರಹ ಲೋಕಾರ್ಪಣೆ

ತುಮಕೂರು – ಕುಣಿಗಲ್ ತಾಲ್ಲೂಕಿನ ಬಿದನಗೆರೆಯಲ್ಲಿ ನಿರ್ಮಿಸಲಾಗಿರುವ ವಿಶ್ವದ ಎತ್ತರದ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ವಿಗ್ರಹ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಶ್ರೀ ಹನುಮನ ಆಶೀರ್ವಾದದಿಂದ ರಾಜ್ಯದ ಪಾಲಿಗೆ ಉತ್ತಮ ದಿನಗಳು ಬರಲಿವೆ ಎಂದು ಅಭಿಪ್ರಾಯಪಟ್ಟರು ಲೋಕ ಕಲ್ಯಾಣಕ್ಕಾಗಿ ಶ್ರೀ ಹನುಮ ಎತ್ತಿದ ಅವತಾರ ಪಂಚಮುಖಿ, ಆ ರೂಪದಲ್ಲಿರುವ ವಿಗ್ರಹ ರಾಜ್ಯದ ಕಲ್ಯಾಣಕ್ಕಾಗಿ ಎಂದರು.

Read More »

ಜಾತಿ ಮರೇತು ರಾಮ ನವಮಿ ಆಚರಿಸಿದ ಮುಸ್ಲಿಂರು

ತುಮಕೂರು: ನಗರದಲ್ಲಿ ಮುಸ್ಲಿಮರೂ ಕೇಸರಿ ಶಲ್ಯ ಧರಿಸಿ ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.ಹಿಂದೂಗಳ ಜತೆ ಅವರೂ ಪಾನಕ ಹಂಚುತ್ತಿದ್ದಾರೆ. ತುಮಕೂರು ನಗರದ ಭದ್ರಮ್ಮ ಸರ್ಕಲ್​ನಲ್ಲಿ ಯುವ ಕಾಂಗ್ರೆಸ್​ನಿಂದ ರಾಮನವಮಿ ಆಚರಣೆ ಮಾಡಲಾಗುತ್ತಿದ್ದು, ‘ಶ್ರೀರಾಮ್’ ಎಂದು‌ ಘೋಷಣೆ ಕೂಗುತ್ತಾ ಕಾರ್ಯಕರ್ತರು ಜನರಿಗೆ ಪಾನಕ ಹಂಚುತ್ತಿದ್ದಾರೆ.

Read More »

ಸಿದ್ಧಲಿಂಗಾ ಮಠಕ್ಕೆ ಇಂದು ಅಮಿತ್‌ ಶಾ ಭೇಟಿ

ತುಮಕೂರು:ನಡೆದಾಡುವ ದೇವರ 115 ಜನ್ಮ ದಿನೋತ್ಸವದ ಹಿನ್ನೆಲೆ ಮಠದಲ್ಲಿ ಹಬ್ಬದ ಅಂಗವಾಗಿ  ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಿದ್ಧಲಿಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.  ಅಮಿತ್‌ ಶಾ ಸ್ವಾಗತಕ್ಕೆ ಸಜ್ಜಾಗಿದೆ.  ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬದ ತಯಾರಿ ನಡೆಸಿದ್ದಾರೆ. ಜೊತೆಗೆ ಅಮಿತ್‌ ಶಾ ಸ್ವಾಗತಕ್ಕೆ ಸಿದ್ಧತೆಯನ್ನು ಮಾಡಿದ್ದಾರೆ. ಶ್ರೀಗಳಿಗೆ ಇಂದು ನಾಲ್ಕು ಲಕ್ಷ ಜನರು ನುಡಿನಮನ ಸಲ್ಲಿಸಲಿದ್ದಾರೆ.

Read More »