ʼಜೋಗಿʼ ಸಿನಿಮಾ ಖ್ಯಾತಿಯ ನಟ ಉಮೇಶ್ ಅಲಿಯಾಸ್ ಕೋತಿ ಮಂಜ ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ನಿನ್ನೆ ರಾತ್ರಿ ನಟ ಕೊನೆಯಸಿರೆಳೆದರು. ಶಿವರಾಜ್ ಕುಮಾರ್ ನಟನೆಯ ʼಜೋಗಿʼ ಚಿತ್ರದಲ್ಲಿ ಕೋತಿ ಮಂಜ ಎಂಬ ಪಾತ್ರದ ಮೂಲಕ ಖ್ಯಾತಿಯಾಗಿದ್ದ ಉಮೇಶ್, ಕೊನೆಗೆ ಅದೇ ಹೆಸರಿನಿಂದಲೇ ಗುರುತಿಸಲ್ಪಡುತ್ತಿದ್ದರು. ಜೋಗಿ ನಂತರ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಕೋತಿ ಮಂಜ ಬಣ್ಣ ಹಚ್ಚಿದ್ದರು. ನಿರ್ದೇಶಕ ಜೋಗಿ ಪ್ರೇಮ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಗವಿಪುರಂ ಗುಟ್ಟಳ್ಳಿಯ ನಿವಾಸದಲ್ಲಿ ಇಂದು ಅಂತಿಮ ದರ್ಶನಕ್ಕೆ ಕೋತಿ ಮಂಜ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಇಂದು ಸಂಜೆ ಅಂತಿಮ ಸಂಸ್ಕಾರಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

