Breaking News

ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ಪಾಸ್ ದುರುಪಯೋಗ

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ಕಾರು ಚಾಲಕನೋರ್ವ ಪಾಸ್ ದುರುಪಯೋಗ ಪಡಿಸಿಕೊಂಡಿರುವ ಘಟನೆ ನಡೆದಿದ್ದು, ಘಟನೆ ಬಳಿಕ ಕಾರು ಚಾಲಕ ನಾಪತ್ತೆಯಾಗಿದ್ದಾನೆ.

ಈ ಹಿಂದೆ ವಿಧಾನಪರಿಷತ್ ಶಾಸಕರಾಗಿದ್ದ ಅವಧಿಯಲ್ಲಿನ ಸ್ಟಿಕರ್ ಬಳಸಿರುವ ಚಾಲಕ. ‘ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ’ ಎಂಬ ಪಾಸ್ ಅಳವಡಿಕೊಂಡು ಹಲವು ದಿನಗಳಿಂದ ಸ್ಕೋಡಾ ಕಾರಿನ ಮುಂಭಾಗದಲ್ಲಿ ಸ್ಟಿಕರ್ ಅಂಟಿಸಿ ತಿರುಗಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದವರಿಂದ ದುರುಪಯೋಗ ಆಗಿರುವ ಶಂಕೆಯಿದೆ. ಈ ಹಿನ್ನೆಲೆ ವಿಧಾನಸೌಧ ಪೊಲೀಸರಿಗೆ ಫೋನ್ ಮೂಲಕ ಸಂಸದರ ಆಪ್ತ ಕಾರ್ಯದರ್ಶಿ ದೂರು ಸಲ್ಲಿಸಿದ್ದಾರೆ. ಸದ್ಯ ಕಾರು ಪತ್ತೆಯಾಗಿದ್ದು, ದೂರು ದಾಖಲಾಗ್ತಿದ್ದಂತೆ ಕಾರು ಚಾಲಕ ನಾಪತ್ತೆಯಾಗಿದ್ದಾನೆ. ಚಾಲಕನಿಗಾಗಿ ವಿಧಾನಸೌಧ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *