ಹುಬ್ಬಳ್ಳಿ: ಈ ಐದು ವರ್ಷ ಅಲ್ಲ ಬರುವ ಐದು ವರ್ಷ ಕೂಡ ಯಾರು ಕಾಂಗ್ರೆಸ್ ಅಲ್ಲಾಡಿಸೋಕೆ ಆಗಲ್ಲ. ಬಿಜೆಪಿ, ಜೆಡಿಎಸ್ ರಾತ್ರಿ ಕನಸು ಬಿಟ್ಟು ಹಗಲು ಕನಸು ಕಾಣಿದ್ದಾರೆ. ಸಿದ್ದರಾಮಯ್ಯ ಸಾಮಾನ್ಯ ಟಗರು ಅಲ್ಲ. ಗುಮ್ಮುವ ಟಗರು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಲೇವಡಿ ಮಾಡಿದರು.
ನಗರದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ವರ್ಚಸ್ಸು ನೋಡಿ ತಡೆಯೋಕೆ ಆಗದೇ ಏನೆನೋ ಮಾಡ್ತಿದ್ದಾರೆ. ಈ ಐದು ವರ್ಷ ಅಲ್ಲ ಇನ್ನೂ ಐದು ವರ್ಷ ಅಂದರೇ ಹತ್ತು ವರ್ಷಗಳ ಕಾಲ ಏನು ಅಲ್ಲಾಡಿಸೋಕೆ ಆಗಲ್ಲ ಎಂದರು.
ಮುಡಾದಲ್ಲಿ ಸಿದ್ದರಾಮಯ್ಯನವರ ಪಾತ್ರ ಏನೂ ಇಲ್ಲ. ಆದರೂ ಸಿಎಂ ಸಿದ್ದರಾಮಯ್ಯನವರ ಜನಪ್ರಿಯತೆ ನೋಡಿ ಸಹಿಸಿಕೊಳ್ಳಲು ಆಗದೇ ಹಾಗೂ ಕಾಂಗ್ರೆಸ್ ಗ್ಯಾರಂಟಿಗಳಿಂದ ಸರ್ಕಾರಕ್ಕೆ ಇರುವ ಅಪಾರ ಜನಬೆಂಬಲದಿಂದ ಬಿಜೆಪಿಗೆ ಇರಿಸು ಮುರಿಸು ಉಂಟಾಗಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

