Breaking News

ಎಮರ್ಜೆನ್ಸಿ ಬಿಡುಗಡೆಗೆ ಸಿದ್ಧ :ಮಾರ್ಕೆಟಿಂಗ್ ವೇಳೆ ನಟಿಗೆ ಬೆದರಿಕೆ

ಮುಂಬೈ: ಕಂಗನಾ ರಣಾವತ್ ಎಮರ್ಜೆನ್ಸಿ ಬಿಡುಗಡೆಗೆ ಸಿದ್ದರಾಗಿದ್ದಾರೆ ಮತ್ತು ಚಿತ್ರದ ಮಾರ್ಕೆಟಿಂಗ್ ಸಮಯದಲ್ಲಿ ತನಗೆ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಪೊಲೀಸರನ್ನು ಕೇಳಿಕೊಂಡಿದ್ದಾರೆ.

ಕಂಗನಾ ರನೌತ್, ‘ಎಮರ್ಜೆನ್ಸಿ’ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಆದರೆ ಸಿನಿಮಾ ಬಿಡುಗಡೆ ಮಾಡಬಾರದೆಂದು ಕೆಲವರು ಒತ್ತಾಯ ಮಾಡಿದ್ದು, ಕೊಲೆ ಬೆದರಿಕೆಗಳು ಸಹ ಬಂದಿವೆ.

ನಟಿ ಕಂಗನಾ ಸ್ವತಃ ಈ ಕೊಲೆ ಬೆದರಿಕೆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಸಿಖ್ ಸಮುದಾಯದ ಕೆಲ ವ್ಯಕ್ತಿಗಳು ಕೋಣೆಯೊಂದರಲ್ಲಿ ಕುಳಿತು ವಿಡಿಯೋ ಮಾಡಿದ್ದು, ವಿಡಿಯೋನಲ್ಲಿ ಕಂಗನಾರನ್ನು ಉದ್ದೇಶಿಸಿ ಮಾತನಾಡಿರುವ ಒಬ್ಬ ವ್ಯಕ್ತಿ, ‘ಒಂದೊಮ್ಮೆ ನೀನು ಈ ಸಿನಿಮಾ ಬಿಡುಗಡೆ ಮಾಡಿದರೆ ಪಂಜಾಬಿಯರಿಂದ ಹೇಗಾದರೂ ಚಪ್ಪಲಿಯಲ್ಲಿ ಹೊಡೆತ ತಿಂದೇ ತಿನ್ನುತ್ತೀಯ ಮಾತ್ರವಲ್ಲದೆ, ಕ್ರಿಶ್ಚಿಯನ್, ಮುಸ್ಲಿಂ ಇತರೆ ಹಿಂದೂಗಳು ಸಹ ನಿನ್ನನ್ನು ಚಪ್ಪಲಿಯಿಂದ ಸ್ವಾಗತ ಮಾಡಲಿದ್ದಾರೆ’ ಎಂದಿದ್ದಾರೆ.

ಅದೇ ವಿಡಿಯೋನಲ್ಲಿ ಇನ್ನೊಬ್ಬ ಪಂಜಾಬಿ ವ್ಯಕ್ತಿ ಮಾತನಾಡಿ, ‘ಸಿನಿಮಾದಲ್ಲಿ ಒಂದೊಮ್ಮೆ ಜರ್ನಲ್ ಸಿಂಗ್ ಬಿಂದಾರ್ನವಾಲೆ ಅವರನ್ನು ಭಯೋತ್ಪಾದಕ ಎಂದು ನೀನು ತೋರಿಸಿದ್ದರೆ, ನೆನಪಿರಲಿ, ನೀನು ಯಾರ ಬಗ್ಗೆ ಸಿನಿಮಾ ಮಾಡುತ್ತಿದ್ದೀಯೋ ಅವರ ಗತಿ ಏನಾಯ್ತು ಎಂಬುದು (ಇಂದಿರಾ ಗಾಂಧಿ) ಅದೇ ಗತಿ ನಿನಗೂ ಆಗುತ್ತದೆ. ಅವರಿಗಾಗಿ ನಾವು ತಲೆ ಕಡಿಸಿಕೊಳ್ಳಲು ತಯಾರಿದ್ದೀವಿ ಹಾಗೆಯೇ ತಲೆ ಕಡಿಯಲು ಸಹ ತಯಾರಾಗುತ್ತೀವಿ’ ಎಂದಿದ್ದಾರೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *