Breaking News

ಪುರಾತನ ದೇವಸ್ಥಾನದಲ್ಲಿ:ಪ್ರಯಾಣಿಕರು ರೀಲ್ಸ್ ಹುಚ್ಚಾಟ

ಕಾಂಬೋಡಿಯಾ : UNESCO ವಿಶ್ವ ಪರಂಪರೆಯ ತಾಣವಾಗಿರುವ ಕಾಂಬೋಡಿಯಾದ ಪುರಾತನ ಅಂಕೋರ್ ವಾಟ್ ದೇವಾಲಯದಲ್ಲಿ ಪ್ರವಾಸಿಗರು ಟೆಂಪಲ್ ರನ್ ಆಟವನ್ನು ಆಡುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರವಾಸಿಗರ ಹುಚ್ಚಾಟಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

2011 ರಲ್ಲಿ ಟೆಂಪಲ್ ರನ್ ನನ್ನು ವಿಶ್ವಕ್ಕೆ ಪರಿಚಯಿಸಲಾಯಿತು, ಅಂತೆಯೇ ಕೆಲವೇ ಕೆಲವು ತಿಂಗಳಲ್ಲಿ ಆ ಗೇಮ್ ಅನ್ನು ಎಲ್ಲರೂ ಆಡಲು ಶುರು ಮಾಡಿದರು, ಆದರೆ ಇದೀಗ ಪ್ರಯಾಣಿಕರು ರೀಲ್ಸ್ ಹುಚ್ಚಿಗಾಗಿ ದೇವಸ್ಥಾನದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹಾನಿಗೊಳಿಸಲಾಗುತ್ತಿದೆ.

ಟಿಕ್ ಟಾಕರ್ ಗಳು, ಫೇಸ್‌ಬುಕ್ ಬಳಕೆದಾರರು ಮತ್ತು ಯೂಟ್ಯೂಬರ್‌ಗಳು ದಿನನಿತ್ಯ ಈ ಸ್ಥಳಕ್ಕೆ ಬಂದು ರಂಪಾಟ ಮಾಡುತ್ತಿದ್ದು, ಈ ಬಗ್ಗೆ ಯುನೆಸ್ಕೋ ಪ್ರವಾಸಿಗರ ವರ್ತನೆ ಬಗ್ಗೆ ಆಕ್ರೋಶ ಹೊರಹಾಕಿದೆ. ಪ್ರವಾಸಿಗರು ದೇವಾಲಯಕ್ಕೆ ಬಂದು ಪ್ರಾರ್ಥನೆ ಮಾಡಿ, ದೇವಸ್ಥಾನದ ಸೌಂದರ್ಯವನ್ನು ನೋಡುವ ಬದಲು ರೀಲ್ಸ್ ಮಾಡಿ ಹುಚ್ಚಾಟ ಮೆರೆಯುತ್ತಿದ್ದಾರೆ. ಇದರಿಂದ ದೇವಸ್ಥಾನದಲ್ಲಿ ಯಾವುದೇ ವಸ್ತುಗೆ ಹಾನಿಯಾಗಿಲ್ಲ ನಿಜ ಆದರೆ ದೇವಳದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಕ್ಕೆ ದೊಡ್ಡ ಮಟ್ಟಿನಲ್ಲಿ ಹಾನಿಯಾಗಬಹುದು ಎಂದರು.

ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಯುನೆಸ್ಕೋ ಪ್ಲಾನ್ ಮಾಡಿದ್ದು, ಹಳೆಯ ದೇವಾಲಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಈಗಾಗಲೇ ದೇವಸ್ಥಾನದಲ್ಲಿ ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಯುನೆಸ್ಕೋ ತಿಳಿಸಿದೆ ಎಂದು ವರದಿಯಾಗಿದೆ.

Share News

About BigTv News

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *