ಹುಬ್ಬಳ್ಳಿ: ದರ್ಶನ್ ಪೋಟೊ ವೈರಲ್ ವಿಚಾರ ಇದೆಲ್ಲವೂ ಮಾಧ್ಯಮ ಸೃಷ್ಟಿ, ದರ್ಶನ್ ನನ್ನ ಆತ್ಮೀಯ ಮಿತ್ರ ನಿಜ. ಸದ್ಯ ಈಗ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ ನಾನು ಕೇವಲ ಜಿಲ್ಲಾ ಉಸ್ತುವಾರಿ ಸಚಿವ ಅಷ್ಟೇ. ಪೊಲೀಸ್ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು,ದರ್ಶನ್ ಬಳ್ಳಾರಿ ಜೈಲಿಗೆ ವರ್ಗಾವಣೆಯ ಹಿಂದೆ ನನ್ನ ಪಾತ್ರವಿಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ದರ್ಶನ್ ಜೈಲಿನಲ್ಲಿರುವಾಗ ನಾನು ಅವರಿಗೆ ಹೇಗೆ ಸಹಾಯ ಮಾಡೋಕೆ ಸಾಧ್ಯ? ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೆ ಸಹಾಯ ಮಾಡೋಕೆ
ಆಗುತ್ತಾ? ಎಂದು ಪ್ರಶ್ನಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

