Breaking News

ಕೋಟೆನಾಡಿನ‌ ರೈತರ ಕೈಹಿಡಿದ ರೇಷ್ಮೆ ಹುಳು ಸಾಕಣೆ ಕಸುಬು

ಚಿತ್ರದುರ್ಗ: ಆ ಊರು ಒಂದು ಕಾಲದಲ್ಲಿ ರೇಷ್ಮೆಗೆ ಹೆಸರುವಾಸಿಯಾಗಿತ್ತು, ಆದ್ರೆ ಆ ಭಾಗದಲ್ಲಿ ಈರುಳ್ಳಿ ಶೇಂಗಾ ಮೆಕ್ಕೆಜೋಳ ಪ್ರಮುಖ ಬೆಳೆಗಳಾಗಿದ್ರಿಂದ ರೇಷ್ಮೆ ಕೃಷಿ ಅವನತಿಯತ್ತ ಸಾಗಿತ್ತು, ಇದೀಗ ಸತತ ಬರಗಾಲ ಆವರಿಸಿರೋದ್ರಿಂದ ಆ ಭಾಗದ ಜನರು ಮತ್ತೆ ರೇಷ್ಮೆ ಕೃಷಿಯತ್ತ ಒಲವು ತೋರುತ್ತಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವ ದಾರಿ ಕಂಡುಕೊಂಡಿದ್ದಾರೆ. ಅಷ್ಟಕ್ಕೂ ರೇಷ್ಮೆಗೆ ಹೆಸರುವಾಸಿಯಾಗಿದ್ದ ಆ ಊರಾದ್ರು ಯಾವ್ದು? ರೇಷ್ಮೆಯಲ್ಲಿ ಲಾಭ ಗಳಿಸೋದು ಹೇಗೆ ಅಂತೀರಾ? ಈ ಸ್ಟೋರಿ ನೋಡಿ..
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಇಂದು ಕಾಲದಲ್ಲಿ‌ ರೇಷ್ಮೆಗೆ ಹೆಸರುವಾಸಿಯಾಗಿತ್ತು. ಹೀಗಾಗಿ ಕೋಟೆನಾಡಿಗೆ ಮೊಳಕಾಲ್ಮೂರು ಹೆಸರು ತಂದುಕೊಟ್ಟ ತಾಲೂಕಾಗಿತ್ತು, ಈ ತಾಲೂಕಿನ ಜನರು ಅತಿ ಹೆಚ್ಚಾಗಿ ರೇಷ್ಮೆ ಹುಳು ಸಾಕಣೆ ಮಾಡ್ತಿದ್ರು, ಆದ್ರೆ ಈ ಭಾಗದಲ್ಲಿ ಶೇಂಗಾ, ಈರುಳ್ಳಿ, ಹಾಗು ಮೆಕ್ಕೆಜೋಳ ಪ್ರಮುಖ ಬೆಳೆಗಳಾಗಿ ಹೆಚ್ಚೆಚ್ಚು ಲಾಭ ಸಿಗುತ್ತಿದ್ದ ಕಾರಣ ಜನರು ರೇಷ್ಮೆ ಹುಳು ಸಾಕಣೆಯನ್ನು ಕೈಬಿಟ್ಟಿದ್ದರು. ಕಳೆದ ಏಳೆಂಟು ವರ್ಷಗಳಿಂದ ಮೊಳಕಾಲ್ಮೂರು ತಾಲೂಕು ಭೀಕರ ಬರಗಾಲಕ್ಕೆ ಸಿಲುಕಿ ತತ್ತರಿಸಿ ಹೋಗಿರೋದ್ರಿಂದ ಪ್ರಮುಖ ಬೆಳೆಗಳು ರೈತರನ್ನು ಸಾಲದ ಸುಳಿಗೆ ಸಿಲುಕಿಸಿವೆ. ಅಂತರ್ಜಲ ಕುಸಿದಿರೋದ್ರಿಂದ ಈ ಭಾಗದಲ್ಲಿ ಈರುಳ್ಳಿ ಮೆಕ್ಕೆಜೋಳ ಬೆಳೆಯೋದು ಕಷ್ಟವಾಗುತ್ತಿದೆ‌. ಹೀಗಾಗಿ ಬೋರ್ ವೆಲ್ ನಲ್ಲಿ ಸಿಗುವ ಅಷ್ಟೋ ಇಷ್ಟೋ ನೀರನ್ನ ಬಳೆಕೆ ಮಾಡಿಕೊಂಡು ಹಿಪ್ಪು ನೇರಳೆ ಬೆಳೆಯುತ್ತಿರುವ ಮೊಳಕಾಲ್ಮೂರು ತಾಲೂಕಿನ ಚಿಕ್ಕೇರಹಳ್ಳಿ ಗ್ರಾಮದ ರೈತ, ತನ್ನ ಜಮೀನಿನಲ್ಲಿ ರೇಷ್ಮೆ ಹುಳು ಸಾಕಣೆ ಮಾಡುವ ಸಲುವಾಗಿ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ, ಅದರಲ್ಲಿ ಆಧುನಿಕ ಪದ್ದತಿಯನ್ನ ಅನುಸರಿಸಿ ತಿಂಗಳಿಗೆ ಒಂದು ಬೆಳೆಯಂತೆ ಎರು ತಿಂಗಳಿಗೊಮ್ಮೆ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ..
ಇನ್ನೂ ಹಿಪ್ಪುನೇರಳೆ ಬೆಳೆಸಲು ಕಡಿಮೆ ನೀರಿನ ಲಭ್ಯತೆ ಇದ್ರು ಸಾಕು, ಹೀಗಾಗಿ ತನ್ನ ನಾಲ್ಕೂವರೆ ಎಕರೆಯಲ್ಲಿ ಸೊಂಪಾಗಿ ಹಿಪ್ಪುನೇರಳೆ ಬೆಳೆಯುತ್ತಿರುವ ರಂಗಾರೆಡ್ಡಿ, ಕ್ರಿಮಿ ಕೀಟಗಳು ಬರದಂತೆ ಶೆಡ್ ಸುತ್ತ ಪರದೆಹಾಕಿ, ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ರೇಷ್ಮೆ ಹುಳು ಸಾಕಣೆ ಮಾಡ್ತಿರೋದು ಈ ಭಾಗದ ಜನರನ್ನು ಆಕರ್ಷಿಸುತ್ತಿದೆ. ಹೀಗಾಗಿ ಪ್ರತಿನಿತ್ಯ ಹಲವಾರು ರೈತರು ಇಲ್ಲಿಗೆ ಭೇಟಿ ನೀಡಿ ರೇಷ್ಮೆ ಸಾಕಣೆ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಮಳೆಯನ್ನು ನಂಬಿ ಇತರ ಬೆಲಕೆಗಳನ್ನ ಬೆಳೆದು ಸಾಲಗಾರರಾಗುವುದಕ್ಕಿಂತ ಪರ್ಯಾಯ ಬೆಳೆಯತ್ತ ಗಮನ ಹರುಸೋದು ಒಳ್ಳೇದು ಅಂತಾರೆ ರಂಗಾರೆಡ್ಡಿ ಸಹೋದರ..
ಒಟ್ಟಾರೆ ಅಪ್ಪ ಹಾಕಿದ ಆಲದ ಮರ ಅಂತ ಈ ಭಾಗದ ಪ್ರಮುಖ ಬೆಳೆಯನ್ನು ಬೆಳೆಯಲು ಹೋಗಿ ಸಾವಿರಾರು ರೈತರು ಮಳೆ ಬೆಳೆ ಕೈಕೊಟ್ಟಿದ್ರಿಂದ ಸಾಲಗಾರರಾಗಿದ್ದಾರೆ. ಇಂತವರ ನಡುವೆ ಪರ್ಯಾಯ ಬೆಳೆಗಳತ್ತ ಮುಖ ಮಾಡುತ್ತಿರುವ ರಂಗಾರೆಡ್ಡಿಯಂತ ಕೆಲವು ರೈತರು ಅಲ್ಪ ಪ್ರಮಾಣದ ಕೃಷಿಯಲ್ಲೇ ಅತಿ ಹೆಚ್ಚು ಲಾಭ ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *