Breaking News

ದಾವಣಗೆರೆ :ಕಾಮುಕ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ!

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಲಿಂಗೇಶ್ವರಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿರುವ ಮುರುಳಿ ಎಂಬಾತ ಬಿಎಸ್ಸಿ ವಿಭಾಗದ ವಿದ್ಯಾರ್ಥಿನಿಗೆ ಕಾಲ್ ಹಾಗೂ ಮೆಸೇಜ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.ಆರೋಪಿ ಮುರುಳಿಯು ವಿದ್ಯಾರ್ಥಿನಿಗೆ ಐ ಲವ್ ಯು ಎಂದು ಮೆಸ್ಸೇಜ್ ಮಾಡಿದ್ದಲ್ಲದೆ, ವಿದ್ಯಾರ್ಥಿನಿ ನನಗೆ ಮಾಡುವೆ ಫಿಕ್ಸ್ ಆಗಿದೆ ಎಂದು ಹೇಳಿದರೂ ಕೂಡ ಅವನನ್ನು ಮದುವೆಯಾಗು ನನ್ನ ಜೊತೆ ಡೇಟಿಂಗ್ ಮಾಡು ಎಂದು ಪೀಡಿಸಿದ್ದಾನೆ.ಅಲ್ಲದೇ ಡೇಟಿಂಗ್ ಅಂದ್ರೆ ಏನು ಕೇಳಿದ್ದಕ್ಕೆ ಮದುವೆ ಆಗ್ತಿಯಾ ಅಲ್ವಾ ನಿನಗೆ ಗೊತ್ತಾಗುತ್ತೆ ಎಂದು ಅಸಭ್ಯವಾಗಿ ಮೆಸ್ಸೇಜ್ ಮಾಡಿದ್ದಾನೆ.ಅತಿಥಿ ಉಪನ್ಯಾಸಕನ ವಿರುದ್ದ ವಿದ್ಯಾರ್ಥಿಗಳು ಚೆನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕ್ರಮಕ್ಕೆ ಅಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

Share News

About BigTv News

Check Also

ಸೊಸೆ ಕಿರುಕುಳಕ್ಕೆ ಬೇಸತ್ತು ಮಾವ ಆತ್ಮಹತ್ಯೆ

ಶಿರಾಳಕೊಪ್ಪ: ಸೊಸೆ ಕಿರುಕುಳಕ್ಕೆ ಬೇಸತ್ತು 55 ವರ್ಷದ ಶಿವಮೂರ್ತಿ ಎಂಬುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ನೇರಲಗಿ …

Leave a Reply

Your email address will not be published. Required fields are marked *