ಬೆಂಗಳೂರು: ರಸ್ತೆಗಳಲ್ಲಿ ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಸರ್ಕಾರದ ವಿರುದ್ಧ ಜನರು ಸಿಡಿದೆದ್ದಿದ್ದಾರೆ, ಗುಂಡಿ ರಸ್ತೆಯಲ್ಲಿ ಸಂಚರಿಸುವಾಗ ಅವಘಡಗಳು ಹೆಚ್ಚಾಗ್ತಿದ್ದು, ಇದರಿಂದ ಸಂಚಾರಿ ಪೊಲೀಸರು ಬೇಸತ್ತಿದ್ದಾರೆ. ಈ ಹಿನ್ನಲೆ ಸಂಚಾರಿ ಪೊಲೀಸರೇ ನಗರದ ಕೆಲವೆಡೆ ಸ್ವಯಂ ಪ್ರೇರಿತರಾಗಿ ಗುಂಡಿ ಮುಚ್ಚುವ ಕೆಲಸ ಮಾಡ್ತಿದ್ದಾರೆ.ಆದ್ರೆ ಇಷ್ಟಾದ್ರೂ ಅಧಿಕಾರಿಗಳು ಹಾಗೂ ಸರ್ಕಾರ ಏನ್ಮಾಡ್ತಿದೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಜನರಿಗೆ ಸರ್ಕಾರದಿಂದ ಗುಂಡಿ ಭಾಗ್ಯ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹೆಚ್ಚಾಗಿದೆ.
ಹೀಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಗುಂಡಿ ಮುಚ್ಚಲು ಪಾಲಿಕೆಗೆ 15 ದಿನಗಳ ಡೆಡ್ ಲೈನ್ ಕೊಟ್ಟಿದ್ದಾರೆ. ಡಿ.ಕೆ ಶಿವಕುಮಾರ್‌ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು ಬರುತ್ತಿರುವುದರಿಂದ ಡಿ.ಕೆ ಶಿವಕುಮಾರ್ ಎಚ್ಚೆತ್ತುಕೊಂಡು ನಿಮ್ಮ ಏರಿಯಾದ ಗುಂಡಿಗಳ ವಿಡಿಯೋ ಕಳುಹಿಸಿ ಎಂದು ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

