ಹುಬ್ವಳ್ಳಿ: ರಾಜ್ಯ ಸರ್ಕಾರ ನಿವೃತ್ತ ನೌಕರರಿಗೆ ಸರ್ಕಾರದಿಂದ ತಾರತಮ್ಯ ಮಾಡಿದೆಂದು ಹೋರಾಟ ಮಾಡುಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 7 ನೇ ವೇತನ ಆಯೋಗವನ್ನು ಹೊರಡಿಸಿದೆ. ಆದ್ರೆ ಪರಿಷ್ಕರಣೆಯಂತೆಯೇ ನೀಡಬೇಕಿದ್ದ ಆರ್ಥಿಕ ಸೌಲಭ್ಯದಲ್ಲಿ ತಾರತಮ್ಯ ಮಾಡಿದೆ. ಇದೇ 18 ರಂದು ಬೆಂಗಳೂರು ಛೆಲೋ ಹೋರಾಟ ಮಾಡಲು ಮುಂದಾಗಿದ್ದಾರೆ.
7 ನೇ ವೇತನ ಆಯೋಗದಂತೆ ನಿವೃತ್ತಿ ವೇತನ ಪಡೆಯಬೇಕಿದ್ದ ನಿವೃತ್ತಿ ಶಿಕ್ಷಕರು, ಆದ್ರೆ ಇವರು ಇನ್ನೂ 6 ನೇ ವೇತನ ಆಯೋಗದ ಸೌಲಭ್ಯವನ್ನು ಪಡೆಯುತ್ತಿದ್ದಾರೆ.ರಾಜ್ಯ ಸರ್ಕಾರದ ಈ ತಾರತಮ್ಯ ನಡೆಗೆ ನಿವೃತ್ತ ಸರ್ಕಾರಿ ನೌಕರರಿಂದ ಅಸಮಾಧಾನ ಭುಗಿಲೆದ್ದಿದೆ. ಧಾರವಾಡ ಜಿಲ್ಲೆ ಸೇರಿದಂತೆ ಇಡೀ ರಾಜ್ಯದೆಲ್ಲೆಡೆ 35 ಸಾವಿರಕ್ಕೂ ಅಧಿಕ ನಿವೃತ್ತ ನೌಕರರು ಸೌಲಭ್ಯ ವಂಚಿತರಿದ್ದಾರೆ. ಶಾಲಾ ಶಿಕ್ಷಕರು ಸೇರಿದಂತೆ ಅನೇಕ ಇಲಾಖೆಗಳ ನಿವೃತ್ತ ನೌಕರರಿಗೆ ಇದುವರೆಗೂ 7 ನೇ ವೇತನ ಆಯೋಗದ ಸೌಲಭ್ಯ ಅನ್ವಯವಾಗಿಲ್ಲ. 2022 ರಿಂದ 2024 ರ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರ ಜೊತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.
7 ನೇ ವೇತನ ಆಯೋಗದ ನಿಯಮಾನುಸಾರದಂತೆ ಆರ್ಥಿಕ ಸೌಲಭ್ಯ ನೀಡದೇ ಅನ್ಯಾಯ ಎಸಗುತ್ತಿರೋದಾಗಿ ಸರ್ಕಾರದ ವಿರುದ್ಧ ನಿವೃತ್ತರು ಗಂಭೀರ ಆರೋಪ ಮಾಡುತ್ತಿದ್ದಾರೆ. ಕೂಡಲೇ 7 ನೇ ವೇತನ ಆಯೋಗದ ಕುರಿತು ಪುನರ್ ಪರಿಶೀಲನೆ ಮಾಡಬೇಕೆಂದು ಸರ್ಕಾರಕ್ಕೆ ಕಟ್ಟೆಚ್ಚರಿಕೆ ನೀಡಿದ ನಿವೃತ್ತ ಸರ್ಕಾರಿ ನೌಕರರು. 7 ನೇ ವೇತನ ಆಯೋಗದ ಸೌಲಭ್ಯ ಕಲ್ಪಿಸದೇ ಹೋದಲ್ಲಿ ಇದೇ 18 ರಂದು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

