ನವಲಗುಂದ: ನವಲಗುಂದ ನಗರದ ಗಣೇಶ ಗುಡಿ ಕರಾವಳಿ ಪ್ರದೇಶದಲ್ಲಿ ಇಡಗುಂಜಿ ಗಣೇಶ ಪ್ರಖ್ಯಾತಿ ಪಡೆದರೆ ನಂತರದ ಸ್ಥಾನ ಪಡೆದು ರಾಜ್ಯದಲ್ಲೇ ಪ್ರಖ್ಯಾತಿ ಹೊಂದಿದೆ. ಇಲ್ಲಿ ಇದೀಗ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ.
ಇಡೀ ರಾಜ್ಯದಲ್ಲೇ ಗಮನ ಸೆಳೆದ ನವಲಗುಂದ-ನರಗುಂದ ಬಂಡಾಯ ನೆಲದಲ್ಲಿ ಒಂದು ವಿಶಿಷ್ಟವಾದ ಚರಿತ್ರೆ ಇದೆ. ಅಜಾತ ನಾಗಲಿಂಗ ಸ್ವಾಮೀಜಿ ಅವರ ಪವಾಡ, ಗವಿಮಠದ ಶ್ರೀ ಬಸಲಿಂಗ ಸ್ವಾಮೀಜಿ ಅದೃಶ್ಯ – ಚರಿತ್ರೆ, ಯಮನೂರಿನ ರಾಜಾಭಾಗಸವಾರ ಹಾಗೂ ಬೇಡಿದ ವರವನ್ನು ದಯಪಾಲಿಸುವ ರಾಮಲಿಂಗ ಕಾಮದೇವ, ಇದನ್ನೂ ಹೊರತು ಪಡಿಸಿ ಇನ್ನೊಂದು ವಿಸ್ಮಯ ಬೆಳಕಿಗೆ ಬಂದಿದೆ. ಅದು ನಗರದ ವಿನಾಯಕ ಪೇಟೆಯಲ್ಲಿರುವ ಗಣಪತಿ ದೇವಾಲಯ ಪುರಾತನ ಕಟ್ಟಡ ಇದಕ್ಕೆ ಸಾಕ್ಷಿ ಎಂಬಂತೆ ಪ್ರಜ್ವಲಿಸುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

