ನವಲಗುಂದ: ಕಳೆದ 15ತಿಂಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆ ವಿಳಂಬದಿಂದಾಗಿ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದೇ ಪುರಸಭೆ ಇಷ್ಟು ದಿನ ಉಪವಿಭಾಗಾಧಿಕಾರಿಗಳ ಹಿಡಿತದಲ್ಲಿ ಇತ್ತು.
ಆದರೆ ಜಿಲ್ಲಾಡಳಿತ ಚುನಾವಣೆ ದಿನಾಂಕ ಘೋಷಣೆ ಮಾಡಿದ ಹಿನ್ನಲೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಒಟ್ಟು 23ಚುನಾಯಿತ ಪ್ರತಿನಿಧಿಗಳ ಪೈಕಿ ಕಾಂಗ್ರೆಸ್ 16 ಜನ ಹಾಗೂ ಬಿಜೆಪಿ 6 ಜನ ಜೆಡಿಎಸ್ ಒಬ್ಬ ಸದಸ್ಯರನ್ನು ಹೊಂದಿದೆ.
ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿರುವ ಪುರಸಭೆ ಅಧಿಕ ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್ ಪಕ್ಷವೇ ಈ ಬಾರಿಯೂ ಕೂಡಾ ಅಧಿಕಾರ ಗದ್ದುಗೆ ಹಿಡಿಯುವದು ಬಹುತೇಕ ಖಚಿತವಾಗಿದೆ.
ಇನ್ನೂ ನಾಳೆ ನಡೆಯುವ ಚುನಾವಣೆಯಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ಯಾರಿಗೆ ಉಪಾಧ್ಯಕ್ಷ ಸ್ಥಾನ ಎಂಬದು ತಿಳಿಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

