Breaking News

ಆಟೋ ಕಾಂಪೋನೆಂಟ್‌ ಸ್ವಾವಲಂಬನೆ ಬೆಳವಣಿಗೆಯನ್ನು ಉತ್ತೇಜಿಸುವುದು ಶ್ಲಾಘನೀಯ: ಕೇಂದ್ರ ಸಚಿವ ಎಚ್ಡಿಕೆ

ನವದೆಹಲಿ: ಆತ್ಮನಿರ್ಭರ್‌ ಭಾರತ ಅಭಿಯಾನದ ಮೂಲಕ ಆಟೋ ಕಾಂಪೋನೆಂಟ್‌ ಕ್ಷೇತ್ರದಲ್ಲಿ ಸ್ವಾವಲಂಬಿಯ ಬೆಳವಣಿಗೆಯನ್ನು ಉತ್ತೇಜಿಸುತ್ತಿರುವುದು ಶ್ಲಾಘನೀಯ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಹೆಚ್‌ ಡಿ.ಕುಮಾರಸ್ವಾಮಿ ಹೇಳಿದರು.
ವಿಕಸಿತ್‌ ಭಾರತ್‌ ಚಲನಶೀಲ ಘಟಕಗಳಲ್ಲಿ ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಪೋಷಿಸುವುದು ಎಂಬ ಶಿರ್ಷಿಕೆಯುಳ್ಳ 64ನೇ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅವರು, ಇದು ಈಗ ಭಾರತದ ಶೇ.2.7ರಷ್ಟು ಜಿಡಿಪಿ ಮತ್ತು 5 ಮಿಲಿಯನ್‌ ಉದ್ಯೋಗಗಳನ್ನು ಒದಗಿಸುತ್ತವೆ. ಈ ಕ್ಷೇತ್ರವು ಈ ವರ್ಷ 300 ದಶಲಕ್ಷ ಡಾಲರ್‌ ವಾಣಿಜ್ಯ ಲಾಭ ಸಾಧಿಸಿದೆ ಎಂದು ಪ್ರಶಂಸಿಸಿದರು.
ಆಟೋ ಕ್ಷೇತ್ರದ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್‌ ಯೋಜನೆಯ ಯಶಸ್ಸನ್ನು, 74,850 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಮೂಲಕ ವಾಹನ ವಲಯಕ್ಕೆ 30,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ತಿಳಿಸಿದರು.
ಸುಧಾರಿತ ಬ್ಯಾಟರಿ ಕೋಶಗಳಿಗಾಗಿ ತಂತ್ರಜ್ಞಾನ ಶ್ರೇಣಿಯ ಮಾದರಿಯ ಬಿಎಲ್‌ಐ ಯೋಜನೆಯ ಕುರಿತು ವಿವರಣೆ ನೀಡಿದ ಅವರು, ಮತ್ತು ಫೇಮ್‌-2 ಯೋಜನೆಯು ಮತ್ತು ಇತ್ತೀಚೆಗೆ ಪ್ರಾರಂಭಿತ ವಿದ್ಯುತ್‌ ವಾಹನ ಇಲೆಕ್ಟ್ರಿಕ್‌ ಮೊಬಿಲಿಟಿ ಪ್ರೋಮೋಷನ್‌ ಸ್ಕೀಮ್‌ (ಇಒ) ಯು ಇಲೆಕ್ಟ್ರಿಕ್‌ ವಾಹನದ ಅಂಗೀಕಾರವನ್ನು ಉತ್ತೇಜಿಸುತ್ತವೆ ಎಂದು ಪ್ರಶಂಸಿಸಿದರು.ಇದಲ್ಲದೆ, ವರ್ಧಿತ ನಾವೀನ್ಯತೆ ಮತ್ತು ಸಹಯೋಗದ ಮೂಲಕ ಆತನಿರ್ಭರ್‌ ಭಾರತದ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *