ಧಾರವಾಡ: ವಕ್ಷ ಬೋರ್ಡ್ ಕಾಯ್ದೆ ತಿದ್ದುಪಡಿ ವಿಚಾರವಾಗಿ ಪರ-ವಿರೋಧ ಎರಡೂ ಶುರುವಾಗಿದೆ. ಇದಕ್ಕೆ ಇಡೀ ದೇಶದಲ್ಲಿ ಮುಸ್ಲಿಂರು ದೊಡ್ಡ ಪ್ರಮಾಣದಲ್ಲಿ ವಿರೋಧ ಮಾಡುತ್ತಿದ್ದಾರೆ ಎಂದು
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರದಿಂದ ವಕ್ಸ್ ಬೋರ್ಡ್ ಕಾಯ್ದೆ ತಿದ್ದುಪಡಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ತಿದ್ದುಪಡಿ ಸಂಬಂಧ ಸಂಸತ್ ಸಮಿತಿ ರಚಿಸಿದೆ, ಈ ಸಮಿತಿಗೆ ಮನೆ ಮನೆಯಿಂದ ಪತ್ರ ಕಳುಹಿಸಿ ಎಂದು ಮುಲ್ಲಾ, ಮೌಲ್ವಿಗಳು ಹೇಳುತ್ತಿದ್ದಾರೆ ತಿದ್ದುಪಡಿ ವಿರೋಧಿಸಿ ಪತ್ರ ಬರೆಯುವಂತೆ ಪ್ರಚಾರ ಮಾಡುತ್ತಿದ್ದಾರೆ ಎಂದಿರುವ ಮುತಾಲಿಕ್, ತಿದ್ದುಪಡಿ ಕಾಯ್ದೆ ಪರವಾಗಿ ಹಿಂದೂಗಳು ನಿಲ್ಲಬೇಕಿದೆ. ಎಲ್ಲ ಹಿಂದೂಗಳು ಆ ಸಮಿತಿಗೆ ಬೆಂಬಲ ನೀಡಬೇಕು. ಪತ್ರ, ಈ ಮೇಲ್ ಮತ್ತಿತರೆ ಮೂಲಕ ಬೆಂಬಲವಾಗಿ ನಿಲ್ಲಬೇಕು ಎಂದಿದ್ದಾರೆ.
40 ತಿದ್ದುಪಡಿಗಳ ಪರವಾಗಿ ನಿಲ್ಲಬೇಕಿದೆ. ಇದೇ ಸೆ.12ಕ್ಕೆ ಶ್ರೀರಾಮ ಸೇನೆ ಸಹಿ ಸಂಗ್ರಹ ಅಭಿಯಾನ ಮಾಡಲಿದೆ ಎಂದಿರುವ ಮುತಾಲಿಕ್, ಸಹಿ ಅಭಿಯಾನದ ಮೂಲಕ ಬೆಂಬಲವಾಗಿ ನಿಲ್ಲುತ್ತೇವೆ. ವಕ್ಸ್ ಬೋರ್ಡ್ ದೇಶಕ್ಕೆ ಅಪಾಯಕಾರಿ, ಇದಕ್ಕೆ ತಿದ್ದುಪಡಿ ಆಗಲೇಬೇಕು, ಇದಕ್ಕೆ ಬೆಂಬಲಾರ್ಥವಾಗಿ ಸಹಿ ಸಂಗ್ರಹ ಅಭಿಯಾನ ಮಾಡಿ ಸಂಸತ್ ಸಮಿತಿಗೆ ಕಳುಹಿಸುತ್ತೇವೆ ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

