ಕನ್ನಡದ ಅತ್ಯಂತ ಸ್ಪುರದ್ರೂಪಿ ನಟರಲ್ಲಿ ಒಬ್ಬರಾಗಿದ್ದ ನಟ ನವೀನ್ ಮಯೂರ್ ತಮ್ಮ 31ನೇ ವಯಸ್ಸಿನಲ್ಲಿ ಜಾಂಡೀಸ್‌ನಿಂದ ಅಕಾಲಿಕವಾಗಿ ಸಾವು ಕಂಡಿದ್ದರು. 2010ರ ಅಕ್ಟೋಬರ್ 3 ರಂದು ಅವರ ಸಾವಿನ ಬಳಿಕ ನವೀನ್ ಮಯೂರ್ ಅವರ ಇಡೀ ಕುಟುಂಬವೇ ಕುಸಿದು ಹೋಗಿತ್ತು.ಮಗನ ನೆನಪಿನಲ್ಲಿಯೇ ಅವರ ತಾಯಿ ಕೂಡ ಕೆಲ ದಿನಗಳ ಬಳಿಕ ಸಾವು ಕಂಡಿದ್ದರು. ನಂತರ ಇದ್ದಿದ್ದು, ಇಡೀ ಮನೆಗೆ ಹಿರಿಯರಾಗಿದ್ದ ನವೀನ್ ಮಯೂರ್ ಅವರ ತಂದೆ ರಘುರಾಮನ್ ಹಾಗೂ ತಮ್ಮ ಶ್ರೇಯಸ್. ಆದರೆ, ಈ ವರ್ಷದ ಜುಲೈನಲ್ಲಿ ರೈಲು ಅಪಘಾತದಲ್ಲಿ ರಘುರಾಮನ್ ಕೂಡ ವಿಧಿವಶರಾಗಿದ್ದರು.
ತಂದೆಯ ಸಾವಿನ ನೋವಿನಲ್ಲಿ ಇರುವಾಗಲೇ ಈಗ ನವೀನ್ ಮಯೂರ್ ಅವರ ಸಹೋದರ ಹಾಗೂ ಪತ್ರಕರ್ತ ಶ್ರೇಯಸ್ ಹೃದಯಾಘಾತದಿಂದ ಮಂಗಳವಾರ ಸಾವು ಕಂಡಿದ್ದಾರೆ. ಈ ಬಗ್ಗೆ ನಟ, ನಿರ್ದೇಶಕ ರಘುರಾಮ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ಅವರೊಂದಿಗೆ ನೂರೊಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಚಾರವನ್ನೂ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

