Breaking News

ಶಾಸಕ ರೇಣಾಕಾಚಾರ್ಯ ನ ಸಹೋದರನ ಮಗ ಶವವಾಗಿ ಪತ್ತೆ… ಸ್ಪೋಟಕ ಮಾಹಿತಿ ಬಿಚ್ಚಿಟ್ಟ ದೊಡಪ್ಪ


ದಾವಣಗೆರೆ:  ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಕಾರಿನ ಸಹಿತ ಚಂದ್ರಶೇಖರ್​ನ ಮೃತದೇಹ ಸಿಕ್ಕಿದೆ. ಇದೊಂದು ಕೊಲೆ, ನಮಗೆ ಆರಂಭದಿಂದಲೂ ಅನುಮಾನವಿತ್ತು ಎಂದು ಚಂದ್ರಶೇಖರ್ ದೊಡ್ಡಪ್ಪ ವಿಶ್ವರಾಧ್ಯ ಸ್ಫೋಟಕ ಆರೋಪ ಮಾಡಿದ್ದಾರೆ.

ಪ್ರತಿಕ್ರಿಯಿಸಿರುವ ಚಂದ್ರಶೇಖರ್ ದೊಡ್ಡಪ್ಪ ವಿಶ್ವರಾಧ್ಯ, ಇದೊಂದು ಕೊಲೆ, ನಮಗೆ ಆರಂಭದಿಂದಲೂ ಅನುಮಾನವಿತ್ತು. ರೇಣುಕಾಚಾರ್ಯರ ಮೇಲಿನ ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ. ಚಂದ್ರಶೇಖರ್ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ನಾಪತ್ತೆಯಾದ ಬಳಿಕ ಚಂದ್ರಶೇಖರ್ ಶವ ಪತ್ತೆಯಾಗಿದೆ. ಅದರಲ್ಲೂ ಚಂದ್ರಶೇಖರ್ ಶವ ಹಿಂದಿನ ಸೀಟ್​ಲ್ಲಿ ಪತ್ತೆಯಾಗಿದೆ. ಹೀಗಾಗಿ ಇದೊಂದು ಕೊಲೆ. ಮರಣೋತ್ತರ ಪರೀಕ್ಷಯಿಂದ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದರು.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *