Breaking News

ಪೋಲಿಸ್ ಸಿಬ್ಬಂದಿ ಧ್ವನಿಯಲ್ಲಿ ಮೂಡಿ ಬಂದ ಬೊಂಬೆ ಹೇಳುತೈತೆ

ಹುಬ್ಬಳ್ಳಿ: ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಠಾಣೆಯ ಸಿಬ್ಬಂದಿ ಡಾ.ಪುನೀತ್ ರಾಜಕುಮಾ‌ರ್ ಅವರ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡನ್ನು ಹಾಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ.

ಅಷ್ಟೇ ಅಲ್ಲದೇ ನಟ ಡಾ. ವಿಷ್ಣುವರ್ಧನ್ ಅವರ ನೂರೊಂದು ನೆನಪು, ಎದೆಯಾಳದಿಂದ ಎಂಬ ಹಾಡನ್ನು ಹಾಡಿ ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ. ಇನ್ನೂ ಪೊಲೀಸ್‌ ಸಿಬ್ಬಂದಿ ಹಾಡಿರುವ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಹುಬ್ಬಳ್ಳಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಮೇಲಿನ ಹಾಡನ್ನ ಪಿಎಸ್‌ಐ ಪದ್ಮಮ್ಮ, ಮಂಜುನಾಥ ಗ್ಯಾನಪ್ಪಯ್ಯನವರ, ಆರ್. ಬೈಲಾಡಿ, ನಾಗರಾಜ ಕಂಬಳಿ, ಪಾಂಡು ಹಂಜಿ, ಆರ್ ಎಂ ಬೈಲಾಡಿ, ಗಣಪತಿ ಅಸೂದೆ ಹಾಡಿದ್ದಾರೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *