ಉಡುಪಿ: ನಿನ್ನೆ ರಾತ್ರಿ ಆಕಾಶದಲ್ಲಿ ಸಾಲುಸಾಲು ಬೆಳಕಿನ ಚುಕ್ಕಿಗಳು ಕಾಣಸಿಕ್ಕಿದ್ದು ಉಡುಪಿ ಜಿಲ್ಲೆಯ ಜನರಲ್ಲಿ ಕೌತುಕ ಮೂಡಿಸಿತು.
ಸರಳರೇಖೆಯಲ್ಲಿ ಹಾದುಹೋದ ನೂರಾರು ಬೆಳಕಿನ ಚುಕ್ಕಿಗಳನ್ನ ಜಿಲ್ಲೆಯ ಜನತೆ ಕಂಡು ಬೆರಗಾದರು.

ಕುಂದಾಪುರ, ಮಲ್ಪೆ ಉಡುಪಿ ಮೊದಲಾದ ಪ್ರದೇಶದಲ್ಲಿ ಜನರು ಇದನ್ನು ವೀಕ್ಷಣೆ ಮಾಡಿದ್ದು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಇದು ಕೃತಕ ಉಪಗ್ರಹಗಳ ಚಲನೆ ಎಂದು ಖಗೋಳತಜ್ಞರು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಜನತೆ ನಿರಾಳರಾದರು.
ಸಂಜೆಯ ವೇಳೆ ಕರಾವಳಿ ಭಾಗದಲ್ಲಿ ಕಂಡು ಬಂದಿರುವ ಅಪರೂಪದ ವಿದ್ಯಮಾನ ಕಂಡು ಜನತೆ ವಿಸ್ಮಯರಾಗಿದ್ದಂತು ಸತ್ಯ
bigtvnews | Hubli Dharwad News | Kannada News | Karnataka News Hubli News | News In Hubli | Local news

