Breaking News

ಸಾಲಗಳ ಮರುಪಾವತಿಗಾಗಿ ಮರಣ ಪ್ರಮಾಣ ಪತ್ರ ಪಡೆದ‌‌ ಭೂಪ

ನವಲಗುಂದ: ಪಟ್ಟಣದ ರಾಮಲಿಂಗ ಓಣಿಯ ನಿವಾಸಿ ಇಮಾಮಹುಸೇನ ಮುಲ್ಲಾನವರ ಅವರು ಸಾಲಗಳ ಮರುಪಾವತಿಗಾಗಿ ಮರಣ ಪ್ರಮಾಣ ಪತ್ರ ಪಡೆದು ಫೈನಾನ್ಸ್‌ ಗಳಿಗೆ ಸಲ್ಲಿಸಿದ್ದಾನೆ.

ಆಗಸ್ಟ್ 21ರಂದು ಪುರಸಭೆಗೆ ಆಗಸ್ಟ್ 27ರಂದು ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಅಧಿಕಾರಿಗಳು ಅದನ್ನು ಪರಿಶೀಲಿಸಿ ಆಗಸ್ಟ್ 29ರಂದು ಪ್ರಮಾಣಪತ್ರ ನೀಡಿದ್ದಾರೆ. ಯಾವುದೇ ವ್ಯಕ್ತಿ ತೀರಿಕೊಂಡರೆ ಪುರಸಭೆಗೆ ಸ್ಥಾನಿಕ ಚೌಕಾಶಿ (ಪಂಚರ ಸಹಿ) ಮಾಡಿ ಆ ಓಣಿಯ/ವಾರ್ಡಿನ ಸದಸ್ಯರ ಹಾಗೂ ಆಶಾ ಕಾರ್ಯಕರ್ತೆಯರು, ಅಷ್ಟೇ ಅಲ್ಲದೇ ಹಿರಿಯರ ಸಹಿ ಪಡೆದು ಅವರೊಂದಿಗೆ ಪರಿಶೀಲಿಸಿ ಮೃತರ ಮನೆಗೆ ಭೇಟಿ ನೀಡಿ ಮರಣ ಪ್ರಮಾಣ ಪತ್ರದ ಅರ್ಜಿ ನೋಂದಣಿ ಮಾಡಲಾಗುತ್ತದೆ. ಆದರೆ ಇಲ್ಲಿನ ಅಧಿಕಾರಿಗಳ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಇದ್ಯಾವುದನ್ನೂ ಮಾಡಿಲ್ಲ. ಈ ಕುರಿತು ಕೇಳಿದರೆ ಕೆಲಸದ ಒತ್ತಡದಲ್ಲಿ ಈ ಘಟನೆ ನಡೆದಿರಬಹುದು ಎಂದು ಸಬೂಬು ನೀಡಿದ್ದಾರೆ.

ಇನ್ನು ಈ ವ್ಯಕ್ತಿ ಬದುಕಿದ್ದಾನೆ ಎಂದು ತಿಳಿದ ತಕ್ಷಣ ಪುರಸಭೆ ಸಿಬ್ಬಂದಿ ಆತನ ಮರಣ ಪ್ರಮಾಣ ಪತ್ರ ರದ್ದು ಮಾಡಲು ಶಿಫಾರಸು ಮಾಡಿದ್ದು, ಸಾಮಾನ್ಯ ವ್ಯಕ್ತಿಗಳಿಗೆ ಮರಣ ಪ್ರಮಾಣ ಪತ್ರ ನೀಡಲು ಒಂದು ವಾರ ಸಮಯ ಕೇಳುವ ಇವರು ಇಮಾಮಹುಸೇನ್‌ಗೆ 3ದಿನಗಳಲ್ಲಿ ನೀಡಿದ್ದು ನೋಡಿದರೆ ಇದರಲ್ಲಿ ಏನೋ ಹಗರಣ ನಡೆದಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Share News

About Shaikh BigTv

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *