Breaking News

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಟೋ ಚಾಲಕರ ಪ್ರತಿಭಟನೆ

ಹುಬ್ಬಳ್ಳಿ : ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್.ಟಿ.ಓ ಹಾಗೂ ಪೊಲೀಸ್ ಇಲಾಖೆಯ ಜೊತೆ ಆಟೋ ರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹು-ಧಾ ಅವಳಿ ನಗರದ ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಪದಾಧಿಕಾರಿಗಳನ್ನು ಕರೆಯದೇ ಏಕಾಏಕಿ ೩೦ ರೂಪಾಯಿ ದರ ನಿಗದಿ ಮಾಡಿದ್ದು ಖಂಡನೀಯ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಮಿನಿ ವಿಧಾನ ಸೌಧದಲ್ಲಿಂದು ತಹಶಿಲ್ದಾರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಪ್ರತಿಭಟನಾಕಾರರು, ಧಾರವಾಡ ನಗರದಲ್ಲಿ ಸುಮಾರು ೮೦ ಕ್ಕೂ ಹೆಚ್ಚು ರ ಆಟೋ ರಿಕ್ಷಾಗಳು ಇದ್ದು , ಸಿ.ಎನ್.ಜಿ ಬಂಕ್ ಗಳನ್ನು ನಿರ್ಮಿಸಬೇಕು, ಅವಳಿನಗರದಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಆಟೋ ನಿಲ್ದಾಣಗಳನ್ನು ನಿರ್ಮಿಸಬೇಕು, ಆಟೋ ರಿಕ್ಷಾ ಫರಮೀಟ್ ೧ ತಿಂಗಳು ತಡವಾದರೇ ಪ್ರತಿ ತಿಂಗಳಿಗೆ ೫೦ ರೂಪಾಯಿ ದಂಡವನ್ನು ವಿಧಿಸಿದ್ದಾರೆ ಅದನ್ನು ಕೂಡಲೇ ಕೈಬಿಡಬೇಕು, ಆಟೋ ರಿಕ್ಷಾ ಫೆರ ಮೀಟರ್ ತಡವಾದ ಪ್ರತಿ ೩ ತಿಂಗಳಿಗೆ ೭೫ ರೂಪಾಯಿ ದಂಡಗಳನ್ನು ವಸೂಲಿ ಮಾಡುತ್ತಿದ್ದು, ಕೂಡಲೇ ಅದನ್ನು ಕೈಬಿಡಬೇಕು, ನಗರದಲ್ಲಿ ಸಂಚರಿಸುವ ಟಾಟಾ ಎ.ಎ.ಎಸ್, ಟಂಟಂ ವಾಹನ ಕ್ರೂಜರ್ ಖಾಸಗಿ ವಾಹನಗಳನ್ನು ನಗರದಿಂದ ೩ ಕಿ.ಮೀ ದೂರದಿಂದ ನಿಲ್ಲಿಸಲು ತಿಳಿಸಬೇಕೆಂದು ಆಟೋ ಚಾಲಕರು ಒತ್ತಾಯಿಸಿದರು.

ಒಟ್ಟಿನಲ್ಲಿ ಆಟೋ ಚಾಲಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶಾಸಕರಾದ ಅರವಿಂದ್ ಬೆಲ್ಲದ್ ಅವರ ಅಧ್ಯಕ್ಷತೆಯಲ್ಲಿ ಮುಂದಿನ ದಿನಗಳಲ್ಲಿ ಸಭೆ ಮಾಡಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.

ಪ್ರತಿಭಟನೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಶೇಖರಯ್ಯಾ ಮಠಪತಿ, ರಫೀಕ್ ಕುಂದಗೋಳ, ರಾಜೇಶ ಬಿಜವಾಡ, ಜಾಫರ, ಕೇರೂರ, ದಾವೂದ್ ಅಲಿಶೇಖ್, ಮಲ್ಲಿಕಾರ್ಜುನ ನಂದಿಹಾಳ, ಗುರು ಬೆಟಗೇರಿ, ಮುರಳಿ ಇಂಗಳಹಳ್ಳಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *