Breaking News

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಹಾಸ್ಟೆಲ್ ವಾರ್ಡನ್

ಕಲಬುರಗಿ: ಹಾಸ್ಟೆಲ್ ದಲ್ಲಿ ಹಾಜರಾತಿ ಹಾಕಲು ಅಡುಗೆ ಸಹಾಯಕರಿಂದ 15 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತರು ಬಲೆ ಬೀಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲಬುರಗಿ ವಿಶ್ವ ವಿದ್ಯಾಲಯ ಮೆಟ್ರಿಕ್ ನಂತರ ಸ್ನಾತಕೋತರ ಬಾಲಕರ ವಸತಿ ನಿಲಯದ ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ 20 ಸಾವಿರ ರೂ ಲಂಚ ಬೇಡಿಕೆ ಇಟ್ಟು 15 ಸಾವಿರ ರೂ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಡುಗೆ ಸಹಾಯಕ ಶ್ರೀಮಂತ ಎನ್ನುವರು ದೂರು ನೀಡಿದ್ದಾರೆ, ಹಾಸ್ಟೆಲ್ ವಾರ್ಡನ್ ಅಡುಗೆ ಸಹಾಯಕರಿಗೆ ಹಾಜರಾತಿಯನ್ನು ಪ್ರತಿ ತಿಂಗಳ ನೀಡಬೇಕಾದರೆ ಎಲ್ಲಾ ಅಡುಗೆ ಸಹಾಯಕರಿಗೆ ಪ್ರತಿ ತಿಂಗಳ 20 ಸಾವಿರ ಹಣವನ್ನು ಕೊಡಬೇಕು, ಹಣ ಕೊಡಲಿಲ್ಲ ಅಂದರೆ ಹಾಜರಾತಿ ಕೊಡುವುದಿಲ್ಲ ಮತ್ತು ಸಂಬಳ ಮಾಡಲ್ಲ ಎಂದು ಬೆದರಿಕೆ ಹಾಕಿದ್ದ, ಇದಕ್ಕೆ ಬೇಸತ್ತು ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ಲಂಚದ ಹಣ ಪಡೆಯುವಾಗ ಹಾಸ್ಟೆಲ್ ವಾರ್ಡನನ್ನು ವಶಕ್ಕೆ ಪಡೆಯಲಾಗಿದೆ, ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೆನಾಳ ಹಾಗೂ ತಂಡದಿಂದ ದಾಳಿ ನಡೆಸಲಾಗಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *