ಧಾರವಾಡ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರ್ನಾಟಕದದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಶಾಲಾ ಪಠ್ಯಕ್ರಮಗಳಲ್ಲಿ ಹಿಂದಿ ಭಾಷೆ ಹೇರಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂವಿಧಾನದ 343 ರಿಂದ 351ನೇ ವಿಧಿ ರದ್ದುಪಡಿಸಿ ಎಲ್ಲ ಭಾಷೆಗಳಿಗೆ ಒಕ್ಕೂಟದ ದೃಷ್ಟಿಯಿಂದ ಸಮಾನ ಎಂದು ಸಾರಬೇಕು. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು, ಪತ್ರ ವ್ಯವಹಾರ ಕೂಡ ಕನ್ನಡದಲ್ಲೇ ಆಗಬೇಕು ಎಂದು ಪ್ರತಿಭಟನಾಕಾರರು
ಒತ್ತಾಯಿಸಿದರು.
ಅಂತರರಾಜ್ಯ ವ್ಯವಹಾರ ಮತ್ತು ಕೇಂದ್ರದೊಂದಿಗಿನ ವ್ಯವಹಾರ ಕೂಡ ಕನ್ನಡದಲ್ಲೇ ಆಗಬೇಕು, ರಾಜ್ಯದಲ್ಲಿನ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ತರಬೇಕು. ಅದರ ಜೊತೆಗೆ ನಮ್ಮ ಪಠ್ಯಕ್ರಮಗಳಿಂದ ಹಿಂದಿ ಕಲಿಕೆ ಕೊನೆಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

