Breaking News

ಲಂಬ ಉಡ್ಡಯನದ ಕ್ಷಿಪಣಿ ಪರೀಕ್ಷೆ ಯಶಸ್ವಿ

ಒಡಿಶಾ: ಲಂಬ ಉಡ್ಡಯನದ ಕಡಿಮೆ ವ್ಯಾಪ್ತಿಯ, ನೆಲದಿಂದ ಆಗಸದ ಗುರಿಗೆ ದಾಳಿ ನಡೆಸುವ(ವಿಎಲ್‌-ಎಸ್‌ಆರ್‌ಎಸ್‌ಎಎಂ) ಕ್ಷಿಪಣಿಯ ಪರೀಕ್ಷೆಯು ಒಡಿಶಾ ಕರಾವಳಿಯ ಚಂಡೀಪುರದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆದಿದೆ.
ಎರಡೂ ಪರೀಕ್ಷೆಗಳು ಯಶಸ್ಸು ಕಂಡಿವೆ ಎಂಬುದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರಕಟಣೆಯು ತಿಳಿಸಿದೆ. ಎರಡೂ ಪರೀಕ್ಷೆಗಳಲ್ಲಿ ಈ ಕ್ಷಿಪಣಿಯು, ಸಮುದ್ರದ ಮಟ್ಟಕ್ಕೆ ಬಹಳ ಸನಿಹದಲ್ಲಿ ತೀವ್ರ ವೇಗದಿಂದ ಸಾಗುತ್ತಿದ್ದ ಗುರಿಯೊಂದನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದೆ ಎಂದು ತಿಳಿಸಲಾಗಿದೆ.
ನಿಖರವಾಗಿ ದಾಳಿ ನಡೆಸುವ ಹಾಗೂ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಕ್ಷಿಪಣಿಯು ತೋರಿಸಿಕೊಟ್ಟಿದೆ, ಕ್ಷಿಪಣಿಯ ಪರೀಕ್ಷೆ ಯಶಸ್ಸು ಕಂಡಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಡಿಆರ್‌ಡಿಒ, ಭಾರತೀಯ ನೌಕಾಪಡೆ ಮತ್ತು ಈ ಪ್ರಯೋಗದಲ್ಲಿ ಭಾಗಿಯಾಗಿದ್ದ ಎಲ್ಲ ತಂಡಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಬಾಲೇಶ್ವರ ಜಿಲ್ಲಾ ಆಡಳಿತವು, ಕ್ಷಿಪಣಿ ಪರೀಕ್ಷಾ ಕೇಂದ್ರದ 2.5 ಕಿ.ಮೀ. ಸುತ್ತಳತೆ ಪ್ರದೇಶದಲ್ಲಿನ ಆರು ಗ್ರಾಮಗಳ 3,100 ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿತ್ತು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *