Breaking News

ತೆನೆಯಲ್ಲಿ ಕಾಳು ಕಟ್ಟದ ಮೆಕ್ಕೆಜೋಳ: ಬೆಳೆ ನಾಶಪಡಿಸಿದ ರೈತ

ರಾಣೆಬೆನ್ನೂರು: ಆಳೆತ್ತರ ಬೆಳೆದರೂ ಒಂದು ಕಾಳು ಕೂಡ ಕಟ್ಟಲಿಲ್ಲ ಎಂದು ತಾಲ್ಲೂಕಿನ ಕಾಕೋಳ ಗ್ರಾಮದ ರೈತ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ಅವರು ತಾವು ಬೆಳೆದ 3 ಎಕರೆ ಮೆಕ್ಕೆಜೋಳದ ಬೆಳೆಯನ್ನು ಮಂಗಳವಾರ ಸಂಪೂರ್ಣ ನಾಶಪಡಿಸಿದ್ದಾರೆ.
ತಾಲ್ಲೂಕಿನ ಕಾಕೋಳ ಗ್ರಾಮದ ರೈತ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು, ಕಾಕೋಳ ಗ್ರಾಮದಲ್ಲೇ ಖಾಸಗಿ ಕೃಷಿ ಕೇಂದ್ರದಲ್ಲಿ ಮೆಕ್ಕೆಜೋಳದ ಬೀಜ ಖರೀದಿಸಿ, ₹ 90 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದರು.
ಬೆಳೆ ಆಳೆತ್ತರ ಹುಲುಸಾಗಿ ಬೆಳೆದಿತ್ತು, ಎಕರೆಗೆ 25 ರಿಂದ 30 ಕ್ವಿಂಟಲ್‌ ಬೆಳೆ ಬರುವ ನಿರೀಕ್ಷೆಯಿತ್ತು. 3 ಎಕರೆ ಜಮೀನಿನಲ್ಲಿ ಬೆಳೆದ ಬೆಳೆಯ ತೆನೆಯಲ್ಲಿ ಒಂದು ಕಾಳು ಕೂಡ ಕಟ್ಟಿಲ್ಲ. ಬೆಳೆ ಹಾನಿ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿಗಳನ್ನು ಬೇಟಿ ಮಾಡಿ ಮನವಿ ಸಲ್ಲಿಸಿದೆ. ಅವರಿಂದ ಸ್ಪಂದನೆ ಸಿಗಲಿಲ್ಲ. ಅದಕ್ಕೆ ಮನಸ್ಸಿಗೆ ನೋವಾಗಿ, ಮೆಕ್ಕೆಜೋಳ ಬೆಳೆ ನಾಶಪಡಿಸಿದೆ ಎಂದು ರೈತ ದ್ಯಾಮಪ್ಪ ತಿಳಿಸಿದರು.
ಮೆಕ್ಕೆಜೋಳ ಉತ್ತಮವಾಗಿ ಬೆಳೆದಿದೆ, ಆದರೆ ಕಾಳು ಕಟ್ಟಿಲ್ಲ ಕಾಳು ಕಟ್ಟದೇ ಇರಲು ತೇವಾಂಶ ಕಾರಣ. ಕೃಷಿ ಇಲಾಖೆಯವರು ಪರಿಶೀಲಿಸಿದ ಬಳಿಕ ಉತ್ತರ ಸಿಗಲಿದೆ ಎಂದು ರೈತ ಮುಖಂಡ ಚನ್ನಬಸಪ್ಪ ಕೊಂಬಳಿ ತಿಳಿಸಿದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *