Breaking News

ಜನರ ಹಸಿವು ನೀಗಿಸಲು 200 ಆನೆಗಳ ಮಾರಣಹೋಮ

ಜಿಂಬಾಬ್ವೆ: ನಮ್ಮ ದೇಶದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲೋದಕ್ಕೆ ನಿಷೇಧ ಇದೆ, ಇದರ ಜೊತೆಗೆ ಇನ್ನೊಂದು ಜೀವಿಗೆ ಹಾನಿ ಮಾಡಿದರೆ ಅದರ ಕರ್ಮ ನಮ್ಮನ್ನು ಬಿಡೋದಿಲ್ಲ ಎನ್ನುವ ನಂಬಿಕೆ ಇದೆ.
ಆದರೆ ಈ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರಿಗೆ ಊಟದ ಸಲುವಾಗಿ 200 ಆನೆಗಳ ಮಾರಣಹೋಮಕ್ಕೆ ಸರ್ಕಾರ ತಯಾರಾಗಿದೆ, ಭೀಕರ ಬರಗಾಲ ಎದುರಿಸುತ್ತಿರುವ ಜಿಂಬಾಬ್ವೆಯಲ್ಲಿ ಜನರಿಗೆ ಆಹಾರ ಒದಗಿಸುವ ಸಲುವಾಗಿ ಆನೆಗಳನ್ನು ಕೊಲ್ಲಲು ಅಲ್ಲಿನ ಅಧಿಕಾರಿಗಳೇ ನಿರ್ಧರಿಸಿದ್ದಾರೆ.
1.63 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಜಿಂಬಾಬ್ವೆ ದೇಶದಲ್ಲಿ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಹಸಿವನ್ನು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *