ಬೆಂಗಳೂರು: ಪೋಷಕರಲ್ಲಿ ಕನ್ನಡದಲ್ಲಿ ಉತ್ತರಿಸಿ ಎಂದಿದಿದ್ದಕ್ಕೆ ಶಿಕ್ಷಕಿಯೊಬ್ಬರು ನನಗೆ ಕನ್ನಡ ಬೇಡವೆಂದು ಅಹಂನಿಂದ ಉತ್ತರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಯಾವಾ ಜಿಲ್ಲೆಯಲ್ಲಿ ನಡೆದಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪೋಷಕರು ತನ್ನ ಮಗನನ್ನು ಯಾಕೆ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಶಿಕ್ಷಕಿ ಆತ ಪಾಠ ಕಲಿತಿಲ್ಲ ಎಂದು ಹೇಳಿದ್ದಾರೆ. ಬಿಸಿಲಿನಲ್ಲಿ ಆತನಿಗೆ ಸರಿಹೋಗಲ್ಲ. ಯಾಕೆ ಹಾಗೇ ನಡೆಸಿಕೊಂಡಿದ್ದಾರೆ ಎಂದಿದ್ದಕ್ಕೆ ಇಂಗ್ಲೀಷ್‌ನಲ್ಲೇ ಉತ್ತರಿಸಿದ್ದಕ್ಕೆ ಪೋಷಕರು ಕನ್ನಡದಲ್ಲಿ ಉತ್ತರಿಸಿ ಎಂದಿದ್ದಾರೆ. ಅದಕ್ಕೆ ಕನ್ನಡದ ಅವಶ್ಯಕತೆ ನನಗಿಲ್ಲ ಎಂದು ಹೇಳಿದರು. ಈ ವಿಡಿಯೋ ಸಾಮಾಜಿಕ ವೈರಲ್ ಆಗಿದೆ. ಪೋಷಕರೊಂದಿಗಿನ ಶಿಕ್ಷಕಿಯ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

