Breaking News

ಮನೆ ಬೀಗ ಮುರಿದು ಆಭರಣ ಕಳತನ

ಹುಬ್ಬಳ್ಳಿ : ಮನೆ ಬೀಗ ಮುರಿದು ಮನೆಯಲ್ಲಿದ್ದ 5.33 ಲಕ್ಷ ಮೌಲ್ಯದ ಆಭರಣ ಕಳತನವಾದ ಘಟನೆ, ಹುಬ್ಬಳ್ಳಿಯ ವಿಜಯನಗರದ ತೃಪ್ತಿ ಬಜಾರನಲ್ಲಿ ನಡೆದಿದೆ.

ದೇವರಮನಿ ಕುಟುಂಬದವರ ಮನೆ ಬೀಗವನ್ನು ಕಳ್ಳರು ಮುರಿದಿದ್ದಾರೆ. ಬಳಿಕ ಮನೆ ಪ್ರವೇಶಿಸಿ ಕೊಠಡಿಯಲ್ಲಿದ್ದ ಬಿರೋ ಬಾಗಿಲು ಮುರಿದು ಈ 2.50 ಲಕ್ಷ ಮೌಲ್ಯದ 50 ಗ್ರಾಂ ಬಂಗಾರದ 4 ಬಳೆ, ಈ 50 ಸಾವಿರ ಮೌಲ್ಯದ 10 ಗ್ರಾಂ 2 ಬಂಗಾರ ಸರ 25 ಸಾವಿರ ಮೌಲ್ಯದ ಉಂಗುರ, 1.50 ಲಕ್ಷ ಮೌಲ್ಯದ ಆಭರಣ, 8 ಸಾವಿರ ಮೌಲ್ಯದ 10 ಗ್ರಾಂ ಬೆಳ್ಳಿ ಬಳೆ ಸೇರಿ ಒಟ್ಟು ಈ 5.33 ಲಕ್ಷ ಮೌಲ್ಯದ ಆಭರಣ ಕಳ್ಳತನವಾಗಿದೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *