ಹುಬ್ಬಳ್ಳಿ: ಬಿಹಾರಿ ಮೂಲದ ಯುವಕರನ್ನು ಪ್ರಶ್ನಿಸಲು ಹೋದ 2 ಯುವಕರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರ್ ಓಣಿಯಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ನೆರೆಹೊರೆಯವರ ಜೊತೆ ಜಗಳ ತೆಗೆಯುತ್ತಿದ್ದರು.ವಿಜಯ ನಗರದ ವಡ್ಡರ್ ಓಣಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಪೇಂಟಿಂಗ್ ಕೆಲಸ ಮಾಡಿಕೊಂಡು ವಾಸವಿದ್ದ ಬಿಹಾರ ಮೂಲದ ನಾಲೈದು ಜನ ಪ್ರತಿ ನಿತ್ಯವೂ ಕೂಡಾ ಸಾರಾಯಿ ಕುಡಿದು ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿದ್ದರು. ಹೀಗಾಗಿ ನಿನ್ನೆ ಕೂಡಾ ಸಾರ್ವಜನಿಕರ ಜೊತೆ ಕಿರಿಕಿರಿ ಮಾಡುತ್ತಿದ್ದ ಇವರನ್ನು ಪ್ರಶ್ನಿಸಲು ಹೋದ ಸೈಫ್ ಹಾಗೂ ಸಂಜಯ ಎಂಬಾತರ ಹೊಟ್ಟೆ ಹಾಗೂ ತಲೆಗೆ ಊಳಿಯಿಂದ ಇರಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಲ್ಲೆ ಮಾಡಿದ ಈ ಬಿಹಾರ ಮೂಲದವರನ್ನು ಅನಿಕೇತ್, ಸರವನ್, ನಾಗೇಂದ್ರ, ಬಬ್ಬು ಅಂತ ತಿಳಿದು ಬಂದಿದ್ದು ಇವರೆಲ್ಲ ಮದ್ಯದ ಜೊತೆಗೆ ಮಾದಕ ವಸ್ತುಗಳನ್ನು ಕೂಡಾ ಸೇವನೆ ಮಾಡಿ ಕಿರಿಕಿರಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಅಶೋಕ ನಗರ ಠಾಣೆಯ PSI ಮಂಜುನಾಥ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ನಾಲ್ಕು ಜನರರನ್ನು ಬಂಧನ ಮಾಡಿ ಆರೋಪಿಗಳ ಮೇಲೆ ಕೊಲೆ ಯತ್ನದ ಪ್ರಕರಣವನ್ನು ಕೂಡಾ ದಾಖಲು ಮಾಡಿ ಜೈಲಿಗೆ ಅಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

