ಹುಬ್ಬಳ್ಳಿ : ಸಾರ್ವಜನಿಕರ ಜೊತೆ ಜಗಳ ತೆಗೆದಿದ್ದನ್ನು ಪ್ರಶ್ನಿಸಿದಕ್ಕೇ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ನಗರ ಠಾಣೆಯ ಪೊಲೀಸರು ಮೂವರನ್ನು ಜೈಲಿಗೆ ಅಟ್ಟಿದ್ದಾರೆ.
ಕಳೆದ ಹಲವು ವರ್ಷಗಳಿಂದ ವಡ್ಡರ್ ಓಣಿಯಲ್ಲಿ ವಾಸವಿದ್ದ ಬಿಹಾರ್ ಮೂಲದ ನಾಲೈದು ಜನ ಪ್ರತಿದಿನ ಕುಡಿದು ಸಾರ್ವಜನಿಕರ ಜೊತೆ ಗಲಾಟೆ ಮಾಡುತ್ತಿದ್ದರು.ಹೀಗಾಗಿ ಇದನ್ನು ಪ್ರಶ್ನೆ ಮಾಡಿದ ಸಂಜಯ್ ಹಾಗೂ ಸೈಫ್ ಎಂಬುವರಿಗೆ ಊಳಿಯಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರಿಗೆ ಹೊಟ್ಟೆ ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು.ಈ ಹಿನ್ನೆಲೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಅಂತಾರೆ ಕಾನೂನು ಸುವ್ಯವಸ್ಥೆ ಡಿಸಿಪಿ ನಂದಗಾವಿ.
bigtvnews | Hubli Dharwad News | Kannada News | Karnataka News Hubli News | News In Hubli | Local news

