ಹುಬ್ಬಳ್ಳಿ: ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದ್ದ
ನಟೋರಿಯಸ್‌ಗಳನ್ನು ಕಮಿಷನರ್ ಎನ್ ಶಶಿಕುಮಾರ್ ಗುಂಡೇಟು ಕೊಟ್ಟು ಜೈಲಿಗೆ ಅಟ್ಟಿದ್ದು , ಇದೀಗ ರೌಡಿ ಶೀಟರ್‌ಗಳಿಗೆ ಜೈಲಿನಲ್ಲಿಯೂ ಕೂಡಾ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಅವಳಿ ನಗರದಲ್ಲಿ ಹದಿಗೆಟ್ಟಿದ್ದ ಕಾನೂನು ಸುವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಕಮಿಷನರ್ ಎನ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಕಮಿಷನರೇಟ್’ನ ಪೊಲೀಸರು ಹಗಲು ರಾತ್ರಿ ಎನ್ನದೇ 2 ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಸುಮಾರು 300ಕ್ಕೂ ಹೆಚ್ಚು ಆರೋಪಿಗಳನ್ನು ಜೈಲಿಗೆ ಅಟ್ಟಿ ಪುಂಡಾಟಿಕೆಯನ್ನು ಕಡಿವಾಣ ಹಾಕಿದ್ದರು. ಆದ್ರೆ ಇಷ್ಟಕ್ಕೆ ಬಿಡದೇ ಇಂದು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಜೈಲು ಪಾಲಾದ ಕ್ರಿಮಿನಲ್ಸ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ಡಿಸಿಪಿ, ಎಸಿಪಿ ಇಂದು ಸಾಯಂಕಾಲ 4.30ರ ಸುಮಾರಿಗೆ ಹುಬ್ಬಳ್ಳಿಯ ಸಬ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.. ಜೈಲಿಗೆ ಸೇರಿದ್ರು ಕೆಲವೊಂದಿಷ್ಟು ರೌಡಿ ಶೀಟರ್’ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ಹೀಗಾಗಿ ಅವರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ದಾಳಿ ಮಾಡಲಾಗಿದೆ ಅಂತಾ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

