Breaking News

ಬುದ್ದಿವಾದ ಹೇಳಿದಕ್ಕೆ ಸರ್ಕಾರಿ ಅಧಿಕಾರಿಯ ಮೇಲೆಯೇ ಹಲ್ಲೆ

ಹುಬ್ಬಳ್ಳಿ : ಮದ್ಯಪಾನ ಮಾಡದಂತೆ ಬುದ್ದಿವಾದ ಹೇಳಿದಕ್ಕೆ ಸರ್ಕಾರಿ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಅದರಗುಂಚಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಯ ಮೇಲೆಯೇ ಹಲ್ಲೆ ಮಾಡಲಾಗಿದ್ದು, ಇವರು ಎಂದಿನಂತೆ ತಮ್ಮ ಚಾವಡಿಯಲ್ಲಿ ಭೂ ದಾಖಲೆಗಳಿಗೆ ಆಧಾರ ಕಾರ್ಡ್ ಸೀಡಿಂಗ್ ಕಾರ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾವಡಿ ಮುಂಭಾಗದಲ್ಲಿಯೇ ಇಬ್ಬರು ಯುವಕರು ಮದ್ಯಪಾನ ಮಾಡುತ್ತಿದ್ದರು.

ಹೀಗಾಗಿ ಗ್ರಾಮ ಆಡಳಿತ ಅಧಿಕಾರಿ ಕಚೇರಿ ಮುಂಭಾಗದಲ್ಲಿ ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆ ನಡೆಸುವುದು ಅಪರಾಧ. ಹೀಗೆ ಮಾಡಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.ಆದರೆ ಅದರಗುಂಚಿ ಗ್ರಾಮದ ಮಹಮ್ಮದ್ ಸಾಬ್ ನದಾಫ್ ಹಾಗೂ ಅವರ ಸಹೋದರ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿ, ಬೈಕಿನ ಚಾವಿಯನ್ನು ತೆಗೆದುಕೊಂಡು ತಲೆ ಹಾಗೂ ಕಣ್ಣಿನ ಕೆಳಭಾಗಕ್ಕೆ ಗಾಯವಾಗುವಂತೆ ಥಳಿಸಿದ್ದಾರೆ.

ಬಳಿಕ ಸ್ಥಳೀಯರು ಗಾಯಗೊಂಡಿದ್ದ ಗ್ರಾಮ ಆಡಳಿತ ಅಧಿಕಾರಿಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ ನಾಶಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಅಧಿಕಾರಿಯ ಆರೋಗ್ಯ ವಿಚಾರಿಸಿದ್ದಾರೆ.

Share News

About Shaikh BigTv

Check Also

ನಡುರಸ್ತೆಯಲ್ಲಿ ಯುವಕ ಕಿತ್ತಾಟ – ಕಳ್ಳರೆಂದು ಭಾವಿಸಿ ಧರ್ಮದೇಟು ನೀಡಿದ ಸ್ಥಳೀಯರು

ಬೆಂಗಳೂರು: ಕಳ್ಳರೆಂಬ ಅನುಮಾನದ ಮೇಲೆ ಇಬ್ಬರು ಯುವಕರನ್ನು ಸ್ಥಳೀಯರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ …

Leave a Reply

Your email address will not be published. Required fields are marked *