Breaking News

ಜಾಗತಿಕ ಸಮೃದ್ಧಿಗೆ ಭಾರತ ಜಪಾನ್ ಸಂಬಂಧ ಅಭಿವೃದ್ಧಿಗೆ ಪೂರಕ: ಪ್ರಧಾನಿ ಮೋದಿ

ನವದೆಹಲಿ : ಜಾಗತಿಕ ಸಮೃದ್ಧಿಗೆ ಭಾರತ ಹಾಗೂ ಜಪಾನ್​ ನಡುವಿನ ಉಭಯ ರಾಷ್ಟ್ರಗಳ ಬಲವಾದ ಸಂಬಂಧವು ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು.
ಅಮೆರಿಕಾದ ವಿಲ್ಮಿಂಗ್ಟನ್​​ನಲ್ಲಿ ನಡೆಯುತ್ತಿರುವ ಕ್ವಾಡ್​​​​​ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಮೋದಿ ಅವರು, ಜಪಾನ್​​​ನ ಪ್ರಧಾನಿ ಫುಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಗ್ರೀನ್​​ ಎನರ್ಜಿ, ಸೆಮಿಕಂಡಕ್ಟರ್, ರಕ್ಷಣಾ ವಲಯ, ಮೂಲ ಸೌಕರ್ಯ ಮತ್ತಿರ ಮಹತ್ವದ ವಿಷಯಗಳಲ್ಲಿ ಭಾರತ ಜಪಾನ್​ ಉಭಯ ರಾಷ್ಟ್ರಗಳ ಸಹಕಾರದ ಕುರಿತು ಮೋದಿ ಅವರು ಚರ್ಚಿಸಿದ್ದಾರೆ. ಈಗಾಗಲೇ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಿ, ಭಾರತ ಅಮೆರಿಕ ಉಭಯ ಸಂಬಂಧಗಳ ಕುರಿತಾಗಿ ಚರ್ಚೆ ನಡೆಸಿದ್ದರು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *