ಹುಬ್ಬಳ್ಳಿ: ಹುಬ್ಬಳ್ಳಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡುವಲ್ಲಿ ಪರ-ವಿರೋಧ ಚರ್ಚೆ ಜೋರಾಗಿ ನಡೆದಿದೆ. ಸ್ಮಶಾನದಲ್ಲಿನ ಇಂದಿರಾ ಕ್ಯಾಂಟೀನಿಂದ ಪ್ರಮೋದ ಮುತಾಲಿಕ್ಗೆ ಏನು ತೊಂದರೆ..? ಅವರನ್ನು ಯಾರೂ ಇಂದಿರಾ ಕ್ಯಾಂಟೀನ್ಗೆ ಊಟಕ್ಕೆ ಕರೆದಿಲ್ಲ, ಹಿಂದೂಗಳ ಬಗ್ಗೆ ಮುತಾಲಿಕ್ ಅವರದ್ದು ಡೋಂಗಿತನ, ಇಂದಿರಾ ಕ್ಯಾಂಟೀನ್ ವಿರೋಧಿಸುವದು ಸನಾತನಿಗಳ ಕುತಂತ್ರ ಎಂದು ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.
ಇನ್ನು ಸಮಾಜಕ್ಕೆ ಒಳ್ಳೆಯದಾಗೋ ಒಂದೇ ಒಂದು ಕೆಲಸ ಮುತಾಲಿಕ್ ಅವರು ಮಾಡಿಲ್ಲ, ಇಂದಿರಾ ಕ್ಯಾಂಟೀನ್ ವಿರೋಧಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸತೀಶ್ ಜಾರಕಿಹೊಳಿಯನ್ನು ಆಹ್ವಾನಿಸಿ, ಬಡವರಿಗಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ್ದಾರೆ. ಬೆಂಬಲ ನೀಡಿ ಹೊರತು ಕೆಡಿಸಬೇಡಿ ಎಂದು ಮನವಿ ಮಾಡಿಕೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news

