ಬೆಂಗಳೂರು: ನಟಿ ದುನಿಯಾ ರಶ್ಮಿ ಅವರ ಮನೆಯಲ್ಲಿ ಸಂಭವಿಸಿದ ಪ್ರತೀಕ್ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ರಶ್ಮಿ ಅವರ ಮೊಬೈಲ್ ವಶಕ್ಕೆ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದು ಪ್ರತೀಕ್ ಸಾವಿಗೀಡಾಗಿದ್ದಾನೆ ಎಂದು ರಶ್ಮಿ ಹೇಳಿದ್ದಾರೆ. ಆದರೆ ಮೃತ ಪ್ರತೀಕ್ ಹಾಗೂ ನಟಿ ರಶ್ಮಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಹೀಗಾಗಿ ಇವರಿಬ್ಬರ ನಡುವೆ ಪ್ರೀತಿ, ಪ್ರೇಮ ಏನಾದ್ರು ಇತ್ತಾ? ಈ ಕಾರಣಕ್ಕೆ ಗಲಾಟೆ ನಡೆದು ಕೆಳಗೆ ಬಿದ್ರಾ ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ಇದರ ನಡುವೆ ಪ್ರತೀಕ್ ಬಿದ್ದ ಕೂಡಲೇ ಎದುರು ಮನೆಯಲ್ಲಿದ್ದ ಚಂದನಾ ಅನ್ನೋ ಯುವತಿ ಕೂಡ ಮೊದಲ ಮಹಡಿಯಿಂದ ಬಿದ್ದಿದ್ದಾಳೆ. ಸದ್ಯ ಯುವತಿ ಬಿಜಿಎಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹೀಗಾಗಿ ಪೊಲೀಸರು ಪ್ರಕರಣ ಸಂಬಂಧ ಆಕೆಯ ಹೇಳಿಕೆಯನ್ನು ಪಡೆಯಲು ಹರಸಾಹಸಪಡುತ್ತಿದ್ದಾರೆ. ಅಂದು ರಾತ್ರಿ ಪ್ರತೀಕ್ ಬೀಳೋದನ್ನ ಯುವತಿ ನೋಡಿದ್ದರಾ? ಅಥವಾ ಆ ಯುವತಿ ಮತ್ತು ಪ್ರತೀಕ್ ಮಧ್ಯೆ ಅಂಥದ್ದೇನಿತ್ತು? ಪ್ರತೀಕ್ ಬಿದ್ದ ಕೂಡಲೇ ಚಂದನಾನೂ ಯಾಕೆ ಬಿದ್ದಳು? ಎನ್ನುವ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಏನಿದು ಪ್ರಕರಣ?ಭಾರತ್ನಗರ ನಿವಾಸಿಯಾಗಿರುವ 25 ವರ್ಷದ ಪ್ರತೀಕ್ ಪೋಟೋಗ್ರಾಫರ್ ಆಗಿದ್ದು, ರಶ್ಮಿ ಅವರ ಸ್ನೇಹಿತರಾಗಿದ್ರು. ಕಳೆದ ಭಾನುವಾರ ಸುಮಾರು 11.30ರ ಸುಮಾರಿಗೆ ನಗರದ ಅನ್ನಪೂರ್ಣೇಶ್ವರಿ ನಗರದಲ್ಲಿರುವ ನಟಿ ರಶ್ಮಿ ಮನೆಯ ಮೂರನೇ ಮಹಡಿಯಿಂದ ಬಿದ್ದು ಪ್ರತೀಕ್ ಸಾವನ್ನಪ್ಪಿದ್ದರು. ರಶ್ಮಿ ಕುಟುಂಬಸ್ಥರು ಮರುದಿನ ಬೆಳಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪ್ರತೀಕ್ ಪಾಲಕರಿಗೆ ವಿಷಯ ತಿಳಿಸಿದ್ದರು, ಘಟನೆ ರಾತ್ರಿಯೇ ನಡೆದಿದ್ದರೂ ಬೆಳಗ್ಗೆವರೆಗೆ ಮಾಹಿತಿ ನೀಡದಿರುವುದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿ, ರಶ್ಮಿ ಕುಟುಂಬದ ವಿರುದ್ಧವೇ ದೂರು ನೀಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





