ಹುಬ್ಬಳ್ಳಿ: ಗಾಯಗೊಂಡಿರುವ ನೀಲಾ ಮಗಳಿಗೆ ಆರೋಪಿ ಮಹೇಶ್ ಮದುವೆಯಾಗು, ಲವ್ ಮಾಡು ಎಂದು ಐದು ವರ್ಷದಿಂದ ಬಲವಂತ ಮಾಡುತ್ತಿದ್ದ ಇಂದು ಏಕಾಏಕಿ ಬಂದು ನೀಲಾ ಎಂಬ ಮಹಿಳೆಗೆ ಚಾಕು ಇರಿದು ಪರಾರಿಯಾಗಿದ್ದ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ನಂತರ ಮಾತನಾಡಿದ ಅವರು , ಹುಬ್ಬಳ್ಳಿಯ ಲೋಹಿಯಾ ಕಾಲೋನಿಯಲ್ಲಿ ಮಹೇಶ್ ಎಂಬಾತ ಏಕಾಏಕಿ ಬಂದು ನಿಮ್ಮನೆಲ್ಲಾ ಕೊಲೆ ಮಾಡುತ್ತೇನೆಂದು ಭಯಪಡಿಸಿ ನೀಲಾ ಎಂಬ ಮಹಿಳೆಗೆ ಚಾಕು ಇರಿದಿದ್ದಾನೆ. ಅಲ್ಲದೇ ಅಲ್ಲಿದ್ದವರಿಗೆ ಹಲ್ಲೆ ಮಾಡಲು ಮುಂದಾಗಿದ್ದಾಗ, ಅವನನ್ನು ಹೊರ ಹಾಕಿದ ಬಳಿ ಅಲ್ಲಿಂದ ಓಡಿ ಹೋಗಿದ್ದಾನೆ. ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ನೀಲಾ ಎಂಬ ಮಹಿಳೆಯನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

