ಚಿತ್ರದುರ್ಗ ,(ಜೂ.15) : ನಗರದಲ್ಲಿ ಶನಿವಾರ ಹಾಡುಹಗಲೇ ಜಯಲಕ್ಷ್ಮೀ ಬಡಾವಣೆ, ಹನುಮಂತನಗರ ಮತ್ತು ವಿದ್ಯಾನಗರದಲ್ಲಿ ಸರಣಿ ಕಳ್ಳತನ ನಡೆದಿದೆ.ಜಯಲಕ್ಷ್ಮೀ ಬಡಾವಣೆಯ ರಾಮಚಂದ್ರರಾವ್,
ಹನುಮಂತನಗರದ ಲಿಂಗರಾಜು ಮತ್ತು ವಿದ್ಯಾ ನಗರದ ಚಂದ್ರಶೇಖರ್ ಎನ್ನುವವರ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮೂರು ಮನೆಗಳಲ್ಲಿ ಟಿವಿ, ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಕೋಟೆಠಾಣೆ ಮತ್ತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





