ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೀಳಿಸಲು ಕಾರಣ ಯಾರು? ಬಿಜೆಪಿ ಕೆಲಸ ಸುಲಭ ಮಾಡಿದ್ದು ನೀವು ಅಲ್ಲವೇ? ರಮೇಶ್ ಜಾರಕಿಹೊಳಿ ಅಂಡ್ ಟೀಮ್ ಗೆ ಸಪೋರ್ಟ್ ಮಾಡಿದವರು ಯಾರು? ಇದೇ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ಗುರುವಾರ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಮೇರಿಕಾಕ್ಕೆ ಹೋದ ತಕ್ಷಣ ಮೊದಲ ವಿಕೆಟ್ ಪತನ ಮಾಡಿದರು. ಐಎಂಎ ಆರೋಪಿ ರಕ್ಷಣೆಗೆ ಮುಂದಾಗಿದ್ದು ಯಾರು? ರಾಮಲಿಂಗರೆಡ್ಡಿ, ಬಿಸಿ ಪಾಟೀಲ್ ಮಂತ್ರಿ ಮಾಡೋಣ ಅಂದೆ. ಪಕ್ಷೇತರ ಶಾಸಕರನ್ನ ಸಚಿವ ಸ್ಥಾನದಿಂದ ಇಳಿಸಿ, ಅವರಿಗೆ ಕೋಡೋಣ ಎಂದೆ.Nothing change ಎಂದು ಹೇಳಿದವರು ಯಾರು?ಟವಲ್ ಕೊಡವಿಕೊಂಡು ಎದ್ದಿದ್ದು ಯಾರು? ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





