ಹುಬ್ಬಳ್ಳಿ: ನಿವೃತ್ತ ಐಜಿಪಿ ಹಾಗೂ ಹುಬ್ಬಳ್ಳಿ – ಧಾರವಾಡ ಮಾಜಿ ಪೊಲೀಸ್ ಆಯುಕ್ತ ಬಿ.ಜಿ. ಕೊಕಟನೂರ (79) ಸೆಪ್ಟೆಂಬರ್ 26ರಂದು ಸಾಯಂಕಾಲ ಧಾರವಾಡದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸ್ವಗ್ರಾಮ ಹಿಡಕಲ್ ನಲ್ಲಿ ಅಂತ್ಯ ಸಂಸ್ಕಾರ ನಾಳೆ ಸೆಪ್ಟೆಂಬರ್ 27ರಂದು ಮಧ್ಯಾಹ್ನ ನಡೆಯಲಿದೆ.
1998-99ರ ಸಾಲಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ದಕ್ಷ ಅಧಿಕಾರಿ ಎಂದೇ ಸಾಕಷ್ಟು ಜನಮನ್ನಣೆ ಗಳಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

