ಹುಬ್ಬಳ್ಳಿ: ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ, ಕೂಡಲೇ ವಿಧಾನ ಸಭೆಯನ್ನು ವಿಸರ್ಜನೆ ಮಾಡಿ ಸಿದ್ದರಾಮಯ್ಯ ನಂತರ ಯಾರು ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಆಗಲ್ಲ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಹಳ ಮಂದಿ ಸಿಎಂ ಪಾಳಿಯಲ್ಲಿದ್ದಾರೆ ಗೋರಿಗೆ ಹೋಗುವವರೂ ಸಹ ಪಾಳೆ ಹಚ್ಚಿದ್ದಾರೆ, ಕೋರ್ಟ್ ಆದೇಶ ಬಂದ ನಂತರ ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಸೂಕ್ತ ಅಧಿಕಾರದಲ್ಲಿ ಇದ್ದರೆ ತನಿಖೆ ಮೇಲೆ ಪ್ರಭಾವ ಖಚಿತ, ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಏನು ಮಾತನಾಡಿದ್ದರೂ ನೆನಪಿಸಿಕೊಳ್ಳಲಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ಯಾವುದೇ ತನಿಖೆ ಎದುರಿಸುವುದು ಸರಿಯಲ್ಲ ಹೈಕೋರ್ಟ್ ನ ಆದೇಶವನ್ನು ಪಾಲಿಸಬೇಕು ಎಂದರು.
ಜಮೀರ್ ಅಹಮದ್ ರಾಜಕೀಯ ತೀರ್ಪು ಅಂತ ಹೇಳಿದ್ರು ಅವರ ತಲೆಯಲ್ಲಿ ಮೆದುಳಿದಿಯೋ ಅಥವಾ ಮಾಂಸ ತುಂಬಿದೆಯೋ ಗೊತ್ತಿಲ್ಲ, ಕೋರ್ಟ್ ತೀರ್ಪಿನ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಇಂಥವರ ಮೇಲೆ ನ್ಯಾಯಾಂಗ ನಿಂದಲೇ ಕೇಸ್ ದಾಖಲಾಗಬೇಕು ಇಂತಹ ಉದ್ಧಟತನದಿಂದ ಮಾತನಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು, ಕೂಡಲೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ರಾಜ್ಯ ಸರ್ಕಾರವನ್ನು ವಿಸರ್ಜಿಸಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

