Breaking News

ಮಾಜಿ ಸಚಿವ ಕೆ.ಬಿ.ಕೋಳಿವಾಡ ಹೇಳಿಕೆ ಅವರ ವೈಯಕ್ತಿಕ, ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ: ಶಾಸಕ ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿ: ಮಾಜಿ ಸಚಿವ ಕೆ.ಬಿ.ಕೋಳಿವಾಡ ಹೇಳಿಕೆ ಅವರ ವೈಯಕ್ತಿಕ, ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಕೋಳಿವಾಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕೋಳಿವಾಡ ಹೇಳಿಕೆ ಪಕ್ಷದ ನಿರ್ಧಾರ ಅಲ್ಲಾ ಹೈಕಮಾಂಡ್ ಇದೆ ನಮ್ಮ ಎಲ್ಲಾ ಶಾಸಕರು ಸಂಪೂರ್ಣವಾಗಿ ಸಿದ್ದರಾಮಯ್ಯನವರ ಬೆನ್ನ ಹಿಂದೆ ಇದ್ದೇವೆ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆ ಬರೋದಿಲ್ಲ ಯಾಕೆ ಕೊಡಬೇಕು ಏನು ತಪ್ಪಿದೆ ಅಂತ ಕೊಡಬೇಕು, ಬಿಜೆಪಿಯವರು ನೂರಾರು ಹಗರಣಗಳನ್ನು ಮುಚ್ಚಿ ಹಾಕಿದ್ದಾರೆ ಸಿಬಿಐ, ಇಡಿ ಕೇಸ್ ಗಳು ಬಿಜೆಪಿ ಅವರ ಮೇಲೆ ಎಷ್ಟಿವೆ ಕೇಳಿ ಶೇ. 90 ರಷ್ಟು ಕೇಸ್ ಕಾಂಗ್ರೆಸ್ ನವರ ಮೇಲೆ ಮಾಡಿದ್ದಾರೆ ಶೇ. 10 ರಷ್ಟು ಕೇಸ್ ಮಾತ್ರ ಬಿಜೆಪಿಯವರ ಮೇಲಿದೆ ಕೇಸ್ ಆದವರು ಬಿಜೆಪಿಗೆ ಹೋದ ಮೇಲೆ ಸ್ವಚ್ಚ ಆಗಿ ಬಿಡ್ತಾರೆ ಬಿಜೆಪಿಯಲ್ಲಿ ಒಳಜಗಳ ಇದ್ದೆ ಇದೆ ಎಂದರು.
ವಿಜಯೇಂದ್ರ ದೊಡ್ಡ ಭ್ರಷ್ಟ ಅಂತಾ ಯತ್ನಾಳ್ ಹೇಳ್ತಾರೆ ಅವರ ತಾಟಿನಲ್ಲಿ ಹೆಗ್ಗಣ ಬಿದ್ದಿದೆ, ಬೇರೆಯವರ ತಾಟಿನಲ್ಲಿ ನೊಣ ನೋಡೋಕೆ ಬರ್ತಾರೆ ದಿನ ಬೆಳಿಗ್ಗೆ ಎದ್ರೆ ಯತ್ನಾಳ್ ಅವರು ಹೇಳಿಕೆ ನೀಡ್ತಾರೆ. ವಿಜಯೇಂದ್ರ ದೊಡ್ಡ ಭ್ರಷ್ಟಾ, ಇಂತವರ ಕೆಳಗೆ ನಾವು ಹೇಗೆ ಕೆಲಸ ಮಾಡ್ಬೇಕು ಅಂತಾರೆ ಈ ರೀತಿ ಹೇಳಿಕೆ ನೀಡಿದ್ರು ಹೈಕಮಾಂಡ್ ಯಾಕೆ ಸುಮ್ಮನೆ ಕೂತಿದೆ ಬಹಿರಂಗವಾಗಿ ಮಾತನಾಡಿದೋರ ಬಗ್ಗೆ ಮೋದಿ, ಜೋಶಿ ಹೇಳಿಕೆ ನೀಡಲಿ.
ಮುಡಾ ಪ್ರಕರಣ ಸಿಬಿಐ ತನಿಖೆಗೆ ಕೊಡಲಿ ಎನ್ನುವ ವಿಚಾರ ನಾನು ಪ್ರಲ್ಹಾದ ಜೋಶಿ ಅವರಿಗೆ ಕೇಳ್ತೀನಿ ನಿಮ್ಮ ಸಮಯದಲ್ಲಿ ಎಷ್ಟು ಪ್ರಕರಣ ಸಿಬಿಐ ಗೆ ಕೊಟ್ಟಿದ್ದೀರಿ ಸುಮ್ನೆ ತಾಕತ್ ಇದ್ರೆ ಅಂತ ಭಾಷಣ ಹೊಡೆಯೋದು ಬೇಡ ನಿಮ್ಮ ಸಮಯದಲ್ಲಿ ಯಾವ ಯಾವ ಪ್ರಕರಣಗಳಿದ್ದವು, ಸಿಬಿಐಗೆ ಕೊಟ್ಟ ಪಟ್ಟಿ ಕೊಡಿ ಸಿಬಿಐ, ಇನ್ಕಮ್ ಟ್ಯಾಕ್ಸ್, ಇಡಿ ಎಲ್ಲವನ್ನು ದುರುಪಯೋಗ ಪಡಿಸಿಕೊಳ್ತಿದ್ದಾರೆ ತಮ್ಮ ಅಧೀನದಲ್ಲಿ ಪಕ್ಷದ ಏಜೆನ್ಸಿ ಆಗಿ ಕೆಲಸ ಮಾಡ್ತಿವೆ ಅವರ ಇಂತಹ ನಡೆಗೆ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ ಸೀತಾರಾಮ, ನಡ್ಡಾ ಮೇಲೆ ಎಫ್ಐಆರ್ ವಿಚಾರವಾಗಿ ಇದರ ಬಗ್ಗೆ ಪ್ರಲ್ಹಾದ ಜೋಶಿ ಅವರು ಏನು ಹೇಳ್ತಾರೆ, 40 ವರ್ಷದಲ್ಲಿ ಕಪ್ಪು ಚುಕ್ಕೆ ಇಲ್ಲಾ ಎನ್ನುವಂತವರು ಈ ಬಗ್ಗೆ ಏನು ಕ್ರಮ ಕೈಗೊಳ್ತಿರಿ ಕುಮಾರಸ್ವಾಮಿ ಪ್ರಕರಣ ಸಹ ಏನು ಮಾಡಿಲ್ಲ. ಮುಡಾದಲ್ಲಿ ಸಿದ್ದರಾಮಯ್ಯ ಅವರ ಏನು ತಪ್ಪಿಲ್ಲ ಏನು ವರದಿ ಕೊಡಬೇಕು, ಕೊಡ್ತಾರೆ ನರೇಂದ್ರ ಮೋದಿಯವರು ಬೇರೆ ಕಡೆ ಹೋಗಿ ಸಿದ್ದರಾಮಯ್ಯ ಬಗ್ಗೆ ಮಾತನಾಡ್ತಿರೋದು ದುರ್ದೈವ ಎಂದು ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.

Share News

About Shaikh BigTv

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *