ಹೊಸಕೋಟೆಯ ಪ್ರಭಾವಿ ನಾಯಕ ಎಂಟಿಬಿ ನಾಗರಾಜ್ (MTB Nagaraj), ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಕಾರುಗಳ ಮೇಲೆ ವಿಶೇಷ ಆಸಕ್ತಿಯಿದ್ದು, ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಪೋರ್ಷೆ ಕೇಯೆನ್ನೆ, ಲ್ಯಾಂಡ್ ರೋವರ್, ಫೆರಾರಿ ಎಫ್8ನಂತಹ ವಿವಿಧ ಕಾರುಗಳನ್ನು ಹೊಂದಿದ್ದಾರೆ.
ಸದ್ಯ, ಎಂಟಿಬಿ ನಾಗರಾಜ್ ಹೊಚ್ಚ ಹೊಸ ಬಿಎಂಡಬ್ಲ್ಯೂ ಎಕ್ಸ್ಎಂ (BMW XM) ಕಾರನ್ನು ಖರೀದಿಸಿದ್ದು, ಅವರ ನಿವಾಸದಲ್ಲಿ ವಿತರಣೆ ಪಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿವೆ. ಈ ಬಿಎಂಡಬ್ಲ್ಯೂ ಎಕ್ಸ್ಎಂ ಎಸ್‌ಯುವಿ, ರೂ.2.60 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ತೆರಿಗೆ ಎಲ್ಲವು ಸೇರಿ ಬೆಂಗಳೂರಿನಲ್ಲಿ ರೂ.3.24 ಕೋಟಿ ಆನ್-ರೋಡ್ ಬೆಲೆಯಾಗುತ್ತದೆ.
ನೂತನ ಬಿಎಂಡಬ್ಲ್ಯೂ ಎಕ್ಸ್ಎಂ ಪವರ್ ಟ್ರೇನ್ ಬಗ್ಗೆ ಮಾತನಾಡುವುದಾದರೆ, ಇದು 4.4 – ಲೀಟರ್ ಟ್ವಿನ್ ಟರ್ಬೊ ವಿ8 ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ಎಂಜಿನ್ ಹೊಂದಿದ್ದು, 653 PS ಪವರ್ ಮತ್ತು 800 Nm ಪೀಕ್ ಟಾರ್ಕ್ ಹೊರಕಹುವ ಸಾಮರ್ಥ್ಯವನ್ನು ಒಳಗೊಂಡಿದೆ. 8 – ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





