ಹುಬ್ಬಳ್ಳಿ : ದ್ಯಾವಪ್ಪನವರ -ವಳಸಂಗ ಎಜ್ಯುಕೇಶನಲ್ ಮತ್ತು ಅಕ್ಯಾಡೆಮಿಕ್ ಟ್ರಸ್ಟನ ಚೇತನ ಮತ್ತು ಸಚೇತನ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಭಾಸ್ಕೆಟಬಾಲ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸದರೀ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದಕ್ಕಾಗಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಕುಮಾರಿ. ಅರ್ಪಿತಾ ಮುರಗೋಡ ಇವಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಡಿ.ವಿ.ಇ. ಟ್ರಸ್ಟಿನ ಅಧ್ಯಕ್ಷ ಜಿ. ವಿ. ವಳಸಂಗ, ಕಾರ್ಯದರ್ಶಿಗಳಾದ ಶ್ರೀ ಮಹೇಶ ದ್ಯಾವಪ್ಪನವರ, ಈ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವೆಕ್ಟರ್ ಅಕ್ಯಾಡೆಮಿಯ ನಿರ್ದೇಶಕ ರಮೇಶ ಬಿಂಗಿ, ಸುನೀಲ ಕಣಬಸ, ಶಂಕರ, ಚೇತನ ಹಾಗೂ ಸಚೇತನ ಕಾಲೇಜಿನ ಪ್ರಾಚಾರ್ಯ ಎಂ. ಪಿ. ಯಡಳ್ಳಿ ಮತ್ತು ಮಹೇಶ ಖುರ್ಸಾಪುರ ಮತ್ತು ಅಕ್ಯಾಡೆಮಿಕ್ ಹೆಡ್ ಆದ ಹೇಮಾವತಿ ಖಾರ್ವಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

