ಚಂಡೀಗಢ: ನಾವು ಅಧಿಕಾರಕ್ಕೆ ಬಂದರೆ 1200 ರೂ.ಗೆ ಮಾರಾಟವಾಗುತ್ತಿರುವ ಎಲ್‌ಪಿಜಿ, ಪ್ರತಿ ಗ್ಯಾಸ್ ಸಿಲಿಂಡರ್‌ಗೆ ಕೇವಲ 500 ರೂ.ಗೆ ಲಭ್ಯವಾಗಲಿದೆ ಎಂದು ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಹರಿಯಾಣದ ಬಹದ್ದೂರ್‌ಗಢದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹರಿಯಾಣದ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನೂ ನೀಡುತ್ತೇವೆ. ಹರಿಯಾಣದ ಜನರು ಸೇನೆಗೆ ಸೇರುತ್ತಿದ್ದರು, ಆದರೆ ನರೇಂದ್ರ ಮೋದಿ ಅವರು ಅಗ್ನಿವೀರ್ ಯೋಜನೆ ತರುವ ಮೂಲಕ ಈ ಹಾದಿಯನ್ನು ಮುಚ್ಚಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತದ ದಲಿತರು, ಹಿಂದುಳಿದವರು ಮತ್ತು ಬಡವರು ಏನನ್ನು ಪಡೆದಿದ್ದರೂ ಅದು ಸಂವಿಧಾನದ ಕೊಡುಗೆಯಾಗಿದೆ. ಆದರೆ ಬಿಜೆಪಿ ಯಾವಾಗಲೂ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಇರುತ್ತದೆ. ಬಿಜೆಪಿಯವರು ಸಂವಿಧಾನವನ್ನು ಹಾಳು ಮಾಡುತ್ತಾರೆ, ನಾವು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಹೇಳಿದರು. ಇಂದಿನ ಭಾರತದಲ್ಲಿ ಎಲ್ಲಾ ಹಣವು ಕೆಲವು ಆಯ್ದ ಬಿಲಿಯನೇರ್‌ಗಳಿಗೆ ಹೋಗುತ್ತಿದೆ. ಇನ್ನು ಪೆಟ್ರೋಲ್, ಡೀಸೆಲ್ ಮತ್ತು ಈರುಳ್ಳಿಯಂತಹ ವಸ್ತುಗಳ ಬೆಲೆಗಳನ್ನು ಹೆಚ್ಚಿಸುವ ಮೂಲಕ ನಿರಂತರವಾಗಿ ನಿಮ್ಮ ಜೇಬಿನಿಂದ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ. ಅದಾನಿ ಅಂಬಾನಿ ಯಾವುದೇ ಒಂದು ವಸ್ತುವಿಗೆ ಪಾವತಿಸುವ ಜಿಎಸ್‌ಟಿಯಷ್ಟೇ ದೇಶದ ಬಡ ರೈತನೂ ಪಾವತಿಸುತ್ತಾನೆ ಎಂಬುದು ಸತ್ಯ. ಅದಕ್ಕೇ ನಾನು, ನರೇಂದ್ರ ಮೋದಿಯವರು ಅದಾನಿ ಅಂಬಾನಿಗೆ ಎಷ್ಟು ಹಣ ಕೊಡುತ್ತಾರೋ, ಅಷ್ಟೇ ಹಣವನ್ನು ದೇಶದ ರೈತರಿಗೆ, ಬಡವರಿಗೆ, ಮಹಿಳೆಯರಿಗೆ ಕೊಡುವ ಮನಸ್ಸು ಮಾಡಿದ್ದಾಗಿ ರಾಹುಲ್ ಗಾಂಧಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

