Breaking News

“ನನ್ನ ಬದುಕೇ ನನ್ನ ಸಂದೇಶ” ಎಂದು ಸರಳವಾಗಿ ಹೇಳಿದವರು: ಎನ್.ಹೆಚ್.ಕೋನರಡ್ಡಿ

ನವಲಗುಂದ: ಹುಟ್ಟು ನಿಶ್ಚಿತ, ಸಾವು ಖಚಿತ ಇವೆರಡರ ನಡುವೆ ಇರುವ ಬದುಕಿನಲ್ಲಿ ನಾವು ಏನು ಸಾಧನೆ ಮಾಡುತ್ತೇವೆ, ಏನು ಸಂದೇಶ ನೀಡುತ್ತೇವೆ ಎನ್ನುವುದು ಮುಖ್ಯ. ಮಹಾತ್ಮ ಗಾಂಧೀಜಿ ಅವರು “ನನ್ನ ಬದುಕೇ ನನ್ನ ಸಂದೇಶ” ಎಂದು ಸರಳವಾಗಿ ಹೇಳಿದವರು ಎಂದು ಶಾಸಕ ಎನ್.ಹೆಚ್.ಕೋನರಡ್ಡಿ ಹೇಳಿದರು.

ನಗರದ ತಹಶೀಲ್ದಾರ ಅವರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಹಾಗೂ ಲಾಲ ಬಹದ್ದೂರ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಸತ್ಯ, ಶಾಂತಿ, ಅಹಿಂಸೆ ಇವು ಅವರು ಬೋಧಿಸಿದ 3 ತತ್ವಗಳು. ಬದುಕಿನಲ್ಲಿ ಇವನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ಸನ್ಮಾರ್ಗದ ಮೂಲಕ ನಾವು ಗುರಿ ತಲುಪಬಹುದು ಎಂದರು.

ನಂತರ ಕಚೇರಿ ಆವರಣದಲ್ಲಿ ಗಾಂಧಿಜಿ ಅವರ ಕನಸಿನಂತೆ ಸ್ವಚ್ಛತೆಗೆ ಮಹತ್ವ ನೀಡಲು ಶಾಸಕರು ಹಾಗೂ ಅಧಿಕಾರಿಗಳು ಕಸ ಗೂಡಿಸುವುದರ ಮೂಲಕ ಸ್ವತಚ್ಛತೆಯ ಬಗ್ಗೆ ಅರಿವು ಮೂಡಿಸಿದರು.

Share News

About Shaikh BigTv

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *